ಯಾದಗಿರಿಯಲ್ಲಿ ರಾಕೇಶ್ ಎಂಬ ಯುವಕನನ್ನು ಹತ್ಯೆಗೈದ ಆರೋಪಿ ಫಯಾಜ್ ಮತ್ತು ಆತನ ಸಂಗಡಿಗರನ್ನು ಬಂಧಿಸಬೇಕು. ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಮಾದಿಗ ಸಮಾಜ ಅಭಿವೃದ್ಧಿ ಸೇವಾ ಸಂಘ ಆಗ್ರಹಿಸಿದೆ.
ರಾಕೇಶ್ ಹತ್ಯೆ ಖಂಡಿಸಿ ಶಹಬಾದದಲ್ಲಿ ಸೇವಾ ಸಂಘದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಶಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರವಿ ಬೆಳಮಗಿ, “ಏಪ್ರಿಲ್ 21ರ ರಾತ್ರಿ ರಾಕೇಶ್‌ನನ್ನು ದುಷ್ಕರ್ಮಿಗಳು ರಾಕೇಶ್‌ನನ್ನು ಹತ್ಯೆಗೈದಿದ್ದಾರೆ. ಆರೋಪಗಳ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
“ರಾಕೇಶ್ ಮನೆಗೆ ನುಗ್ಗಿದ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಿವರಾಜ್ ಕೋರೆ ಶರಣು ಪ ಗಲಪುರ್ ವಿಕ್ರಂ ಮೂಲಿಮನಿ ಲಕ್ಷ್ಮಿಕಾಂತ್ ಬಳಿಚಕ್ರ ಸಂತೋಷ್ ಹುಲಿ ಪರಶುರಾಮ್ ದೇವತ್ಕಲ್ ಮಹೇಶ್ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.