ಬೆಂಗಳೂರಿನ ಹೆಚ್‌ಬಿಆರ್ ಬಡಾವಣೆಯಲ್ಲಿರುವ ಬ್ಯಾರೀಸ್ ಸೌಹಾರ್ದ ಭವನದಲ್ಲಿ ಹೈಕೋರ್ಟ್ ಯಕ್ಷಗಾನಾಭಿಮಾನಿ ವಕೀಲರು ಬೆಂಗಳೂರು, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅವರ ಸಹಕಾರದೊಂದಿಗೆ ಧರ್ಮಸ್ಥಳದ ಮಹಾಗಣಪತಿ ಯಕ್ಷಗಾನ ಮಂಡಳಿ ಇವರಿಂದ “ಶ್ರೀಮತಿ ಪರಿಣಾಯ ಅಗ್ರ ಪೂಜೆ” ಎಂಬ ಯಕ್ಷಗಾನ ಪ್ರಸಂಗ ಆಯೋಜಿಸಲಾಗಿತ್ತು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಮೊಹಮ್ಮದ್ ನವಾಜ್, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ ಕೆ.ರಾಜೇಶ್ ರೈ,ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಮತ್ತು ಬ್ಯಾರಿ ಅಸೋಸಿಯೇಷನ್ ನ ಪ್ರವರ್ತಕರಾದ ಉಮರ್ ಟೀಕೆ , ಹೈಕೋರ್ಟಿನ ಹಿರಿಯ ನ್ಯಾಯವಾದಿ ಶ್ರೀ.ಕೆ.ಎಸ್.ವ್ಯಾಸ ರಾವ್ ಉಪಸ್ಥಿತರಿದ್ದರು.

ಕರಾವಳಿಯ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಸಹೋದರ ಸಮುದಾಯದೊಂದಿಗೆ ಬ್ಯಾರಿ ಸಮುದಾಯವು ಕೈ ಜೋಡಿಸಿದೆ. ಇಂತಹ ಕಲಾ ಕಾರ್ಯಕ್ರಮಗಳು ಅವಿಭಜಿತ ದ.ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಲ್ಲಿ ಶಾಂತಿ ಸೌಹಾರ್ದತೆ ಹೆಚ್ಚಿಸಲು ಪೂರಕವಾಗಿದೆ. ಈ ಕಾರ್ಯಕ್ರಮವು ಸೌಹಾರ್ದ ಭವನದಲ್ಲಿ ಆಯೋಜಿಸಿದ್ದಕ್ಕೆ ವಂದನೆ ಸಲ್ಲಿಸಿ ಮುಂದಿನ ವರ್ಷವೂ ಅಯೋಜಿಸುವಂತೆ ಉಮರ್ ಟೀಕೆ ತಿಳಿಸಿದರು.
ಇದನ್ನು ಓದಿದ್ದೀರಾ? ಬಾಗಲಕೋಟೆ | ಹಲವು ಬೆಳವಣಿಗೆಯ ನಡುವೆ ಮುಧೋಳ ನಗರಸಭೆ ಕಾಂಗ್ರೆಸ್ ತೆಕ್ಕೆಗೆ
ಕಲಾಭಿಮಾನಿಗಳ ಮೆಚ್ಚುಗೆಯೊಂದಿಗೆ, ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದ ರೂವಾರಿಗಳಾದ ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ ಎಂ.ಸುಧಾಕರ ಪೈ ಸ್ವಾಗತಿಸಿ, ವಂದಿಸಿದರು.
