ಕಳೆದ ಶನಿವಾರ ರಾತ್ರಿ ಕುಂಜಾಲಿನ ರಸ್ತೆಯಲ್ಲಿ ದನದ ರುಂಡ ಪತ್ತೆ ಪ್ರಕರಣದಲ್ಲಿ ತಾನು ರಾಜಕೀಯದ ಲಾಭ ಪಡೆಯುವ ತರಾತುರಿಯಲ್ಲಿ ಬ್ರಹ್ಮಾವರದಲ್ಲಿ ನಿಂತುಕೊಂಡು 24 ಗಂಟೆಯಲ್ಲಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಭಾಷಣ ಬಿಗಿದು ಬಂದ ಶಾಸಕ ಯಷ್ಪಾಲ್ ಸುವರ್ಣರಿಗೆ ತೀವ್ರ ಮುಖಭಂಗವಾಗಿದೆ. ಪ್ರಕರಣದಲ್ಲಿ ಯಾರಿಗೋ ಅಪರಾಧಿಯ ಪಟ್ಟ ಕಟ್ಟಲು ಹೋಗಿ ಪ್ರಕರಣದಲ್ಲಿ ಅವರ ಪಕ್ಷದವರೇ ಒಬ್ಬ ಆರೋಪಿ ಶಾಮೀಲಾಗಿರುವುದು ಕಂಡು ಈಗ ಮೌನಕ್ಕೆ ಜಾರಿದ್ದಾರೆ.
ಪೋಲೀಸ್ ಇಲಾಖೆ ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ತನಿಖೆಯಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿದ್ದಾರೆ. ಬೀಫ್ ತಿನ್ನುವವರು ಕೇವಲ ಅಲ್ಪಸಂಖ್ಯಾತರು ಮಾತ್ರ ಅಲ್ಲ ಬೇರೆಯವರು ಸಹ ತಿನ್ನುತ್ತಾರೆ ಎಂದು ಸಾಬೀತಾಗಿದೆ. ಆರೋಪಿಗಳು ತಿನ್ನಲಿಕ್ಕೆ ಮತ್ತು ವ್ಯಾಪಾರಕ್ಕಾಗಿ ಈ ದಂಧೆ ಮಾಡುತ್ತಿದ್ದರು ಎಂದು ಪೊಲೀಸರ ಎದುರು ಆರೋಪಿಗಳೇ ಒಪ್ಪಿಕೊಂಡಿದ್ದಾರೆ. ಈಗ ಆರೋಪಿಗಳು ಯಾರು ಎಂದು ಬಹಿರಂಗವಾಗಿದೆ ಉಡುಪಿ ಶಾಸಕ ಯಷ್ಪಾಲ್ ಸುವರ್ಣ ಈಗ ಏನನ್ನುತ್ತಾರೆ? ಎಂದು ಪ್ರಶ್ನಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಡುಪಿ ಜಿಲ್ಲಾಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರು ಈ ಸಂದರ್ಭದಲ್ಲಿ ಪೋಲೀಸ್ ವರಿಷ್ಟಾಧಿಕಾರಿಯವರಿಗೆ ಮತ್ತು ಅವರ ಸಿಬ್ಬಂದಿಗಳಿಗೆ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.