98ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ನೀರಜ್ ಘಾಯ್‌ವಾನ್ ನಿರ್ದೇಶನದ ಸಿನಿಮಾ ‘ಹೋಮ್‌ಬೌಂಡ್’ ಅಧಿಕೃತವಾಗಿ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಈ ಸಿನಿಮಾ ಸ್ಪರ್ಧಿಸಲಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎನ್ ಚಂದ್ರ ತಿಳಿಸಿದ್ದಾರೆ.
ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವಿಭಿನ್ನ ಭಾಷೆಗಳ 24 ಚಲನಚಿತ್ರಗಳು ಪೈಪೋಟಿ ನಡೆಸಿದ್ದವು. ಪುಷ್ಪ2, ಬೆಂಗಾಲ್ ಫೈಲ್ಸ್, ತನ್ವಿ ದಿ ಗ್ರೇಟ್, ಕೇಸರಿ:ಚಾಪ್ಟರ್ 2,ಕಣ್ಣಪ್ಪ, ಕುಬೇರ, ಫುಲೆ ಮುಂದಾದ ಸಿನಿಮಾಗಳು ಪೈಪೋಟಿಯಲ್ಲಿದ್ದವು. ಈ ಸಿನಿಮಾಗಳ ಪೈಕಿ, ‘ಹೋಮ್‌ಬೌಂಡ್’ ಸಿನಿಮಾವನ್ನು 14 ಮಂದಿ ಸದಸ್ಯರಿದ್ದ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಅವರು ವಿವರಿಸಿದ್ದಾರೆ.
ಉತ್ತರ ಭಾರತದ ಸಣ್ಣ ಹಳ್ಳಿಯೊಂದರ ಇಬ್ಬರು ಬಾಲ್ಯ ಸ್ನೇಹಿತರು, ತಲತಲಾಂತರಗಳಿಂದ ನಿರಾಕರಿಸಲಾಗಿದ್ದ ಘನತೆ ಮತ್ತು ಸ್ವಾಭಿಮಾನಕ್ಕಾಗಿ ಪೊಲೀಸ್ ನೌಕರಿಯ ಬೆನ್ನೆತ್ತಿ ಹೋಗುವ ಕಥೆ ಸಿನಿಮಾದ ಹಂದರವಾಗಿದೆ. ಸಿನಿಮಾದಲ್ಲಿ ಇಶಾನ್‌ಕಟ್ಟರ್, ವಿಶಾಲ್ ಜೇಥ್ವಾ ಹಾಗೂ ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.