ಸಂಘಪರಿವಾರ ಮತ್ತು ಹಿಂದುತ್ವವಾದಿಗಳ ವಿರೋಧ, ದಾಂಧಲೆ ಹಾಗೂ ಆಕ್ಷೇಪದ ಕಾರಣದಿಂದಾಗಿ ಹಿಂದಿ ಭಾಷೆಯ ‘ಫುಲೆ’ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಈ ಮೊದಲ, ಏಪ್ರಿಲ್ 11ರಂದು ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಈಗ, ಬಿಡುಗಡೆ ದಿನಾಂಕವನ್ನು ಏಪ್ರಿಲ್ 25ಕ್ಕೆ ನಿಗದಿ ಮಾಡಲಾಗಿದೆ.
ಹಿಂದುತ್ವವಾದಿ, ಮನುವಾದಿ, ಜಾತಿವಾದಿಗಳ ಒತ್ತಡಕ್ಕೆ ಮಣಿದಿರುವ ‘ಸೆನ್ಸರ್ ಬೋರ್ಡ್’ ಸಿನಿಮಾದಲ್ಲಿ 12 ಬದಲಾವಣೆಗಳನ್ನು ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದೆ. ಬದಲಾವಣೆಗಳನ್ನು ಮಾಡುವ ಕಾರಣದಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.