ಭಾರತ ಹಿಂದಿನಿಂದಲೂ ಶಾಂತಿ ರಾಷ್ಟ್ರವಾಗಿದೆ. ಆದರೆ, ಪಾಕಿಸ್ತಾನದೊಂದಿಗೆ ನಾವು ಶಾಂತಿಯಿಂದ ಇರಲು ಸಾಧ್ಯವಿಲ್ಲ. ನಮ್ಮ ದೇಶದ ಸೈನ್ಯಕ್ಕೆ ಆಗಾದವಾದ ಶಕ್ತಿ ಇದೆ. ನಮ್ಮ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು.
‘ಆಪರೇಷನ್ ಸಿಂಧೂರ’ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದರು.
“ಆತಂಕವಾದಿಗಳ ಹೆಡ್ ಕ್ವಾಟರ್ಸ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬಹವಾಲ್ಪುರ್, ಮುರಿಡ್ಕೆ ಇವು ಜಾಗತಿಕ ಉಗ್ರವಾದದ ವಿಶ್ವವಿದ್ಯಾಲಯಗಳಾಗಿದ್ದವು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಉಗ್ರವಾದಿಗಳ ತಾಣಗಳು ಈಗ ಸಂಪೂರ್ಣ ನಾಶವಾಗಿವೆ” ಎಂದು ತಿಳಿಸಿದರು.
