ಅಂತಿಮ ಘಟ್ಟ ತಲುಪಿರುವ ಐಪಿಎಲ್‌ನ ರೋಚಕ ಹಣಾಹಣಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ತಂಡ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಆರ್‌ಸಿಬಿಯ ರಜತ್ ಪಾಟಿದಾರ್ ತಂಡ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ. ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಉಭಯ ತಂಡಗಳಿಂದ 11 ಆಟಗಾರರ ಪಡೆ ತಮ್ಮ ಕ್ರೀಡಾ ಪರಾಕ್ರಮ ತೋರಲು ಸಿದ್ಧರಾಗಿದ್ದಾರೆ.
ಎರಡೂ ತಂಡಗಳು ಬಹಳ ಸಮಯದ ನಂತರ ಫೈನಲ್ ತಲುಪಿದ್ದು, ಇಲ್ಲಿಯವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲವಾದ್ದರಿಂದ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅದು ಅವರ ಚೊಚ್ಚಲ ಐಪಿಎಲ್ ಪ್ರಶಸ್ತಿಯಾಗಲಿದೆ.
ಇದು ಬೆಂಗಳೂರಿನ ನಾಲ್ಕನೇ ಐಪಿಎಲ್ ಫೈನಲ್ ಆಗಲಿದೆ. ಇದಕ್ಕೂ ಮೊದಲು ತಂಡವು 3 ಬಾರಿ ಸೋಲನ್ನು ಎದುರಿಸಿದೆ. 2009 ರಲ್ಲಿ ಮೊದಲು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತು. ನಂತರ 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ನಂತರ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೆಂಗಳೂರು ತಂಡವನ್ನು ಕೇವಲ 8 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಎರಡನೇ ಬಾರಿಗೆ ಫೈನಲ್ ಆಡುತ್ತಿದೆ. 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫೈನಲ್ ಆಡಿದ್ದ ಪಂಜಾಬ್ಗೆ ಸೋಲು ಎದುರಾಗಿತ್ತು.
