ಧರ್ಮಸ್ಥಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ ಸ್ಥಳಗಳ ಪೈಕಿ 13ನೇ ಪಾಯಿಂಟ್‌ನಲ್ಲಿ ಇಂದು ಶೋಧ ಕಾರ್ಯಾಚರಣೆ ಮುಂದುವರೆಯಲಿದೆ. ದೂರುದಾರ ಮೊದಲ ಬಾರಿಗೆ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದು, ಬಳಿಕ 17 ಸ್ಥಳಗಳನ್ನು ಗುರುತು ಮಾಡಲಾಗಿದೆ. ಈ ಪೈಕಿ 13ನೇ ಸ್ಥಳದಲ್ಲಿ ಹಲವು ಶವಗಳನ್ನು ಅಕ್ರಮವಾಗಿ ಹೂತಿರುವುದಾಗಿ ದೂರುದಾರ ಹೇಳಿರುವ ಕಾರಣ ಈ ಸ್ಥಳದ ಶೋಧ ಹೆಚ್ಚು ಗಮನ ಸೆಳೆದಿದೆ. ನಿನ್ನೆ ಶೋಧದಲ್ಲಿ ಏನೂ ಪತ್ತೆಯಾಗಿಲ್ಲ.
