ವಿಶ್ವದಲ್ಲಿ ನಡೆದ ಹಲವು ಯುದ್ಧಗಳನ್ನು ನಿಲ್ಲಿಸಿದ ಶ್ರೇಯಸ್ಸನ್ನು ನಿರಂತರವಾಗಿ ತಮ್ಮ ಮೇಲೆ ತಾವೇ ಹೇರಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, “ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ” ಎಂದು ಪುನರುಚ್ಚಾರ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ವಿಶ್ವದಾದ್ಯಂತ ಏಳು ಯುದ್ಧಗಳನ್ನು ತಾವು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. “ನನಗೆ ಸುಂಕಗಳು ಮತ್ತು ವ್ಯಾಪಾರ ಎಂಬ ಅಸ್ತ್ರವಿತ್ತು. ‘ನೀವು ಹೋರಾಡಲು ಹೋಗಿ ಎಲ್ಲರನ್ನೂ ಕೊಲ್ಲಲು ಬಯಸಿದರೆ, ಅದು ಸರಿ, ಆದರೆ ನೀವು ನಮ್ಮೊಂದಿಗೆ ವ್ಯಾಪಾರ ಮಾಡುವಾಗ ನಾನು ನಿಮಗೆ ಶೇಕಡ 100ರಷ್ಟು ಸುಂಕವನ್ನು ವಿಧಿಸುತ್ತೇನೆ’ ಎಂದು ಹೇಳಿದೆ. ಅವರೆಲ್ಲರೂ ಯುದ್ಧವನ್ನೇ ಕೈಬಿಟ್ಟರು” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
