ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಮೇ 4 ರಂದು ನಡೆದ ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG 2025 ರ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. NEET UG 2025ಗೆ ಹಾಜರಾದ 22.09 ಲಕ್ಷ ಅಭ್ಯರ್ಥಿಗಳಲ್ಲಿ 12,36,531 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಪರೀಕ್ಷಾ ಮಂಡಳಿ ಘೋಷಿಸಿದೆ.
ಉತ್ತರ ಪ್ರದೇಶದ 1.70 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರೆ, ಮಹಾರಾಷ್ಟ್ರದ 1.25 ಲಕ್ಷಕ್ಕೂ ಹೆಚ್ಚು ಹಾಗೂ ರಾಜಸ್ಥಾನದ 1.19 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆಯುವ ಮೂಲಕ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.
ರಾಜಸ್ಥಾನದ ಅಭ್ಯರ್ಥಿ ಟಾಪರ್: ರಾಜಸ್ಥಾನದ ಮಹೇಶ್ ಕುಮಾರ್ ನೀಟ್ ಯುಜಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಎಐಆರ್ 1ರಲ್ಲಿ ಸ್ಥಾನ ಪಡೆದಿದ್ದರೆ, ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ಎರಡನೇ ಸ್ಥಾನ ಪಡೆದಿದ್ದಾರೆ. ಎಐಆರ್ 5 ರಲ್ಲಿ ದೆಹಲಿಯ ಅವಿಕಾ ಅಗರ್ವಾಲ್ ಮಹಿಳಾ ಟಾಪರ್ ಆಗಿದ್ದಾರೆ.