14 ವರ್ಷದ ಬಾಲಕಿಯ ಮೇಲೆ ಆಕೆಯ ಶಾಲಾ ಸಹಪಾಠಿಯೇ ಅತ್ಯಾಚಾರ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದಲ್ಲಿ ನಡೆದಿದ್ದು, ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ದೂರಿನ ಆಧಾರದಲ್ಲಿ ಪೊಲೀಸರು ಗುರುವಾರ ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಅಡಿಯಲ್ಲಿ 14 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಲಕಿಯ ಅತ್ಯಾಚಾರ; ಮಠದ ಅರ್ಚಕ ಸೇರಿ ಇಬ್ಬರ ಬಂಧನ
ಬಾಲಕಿ ಮತ್ತು ಆರೋಪಿ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ದೂರಿನ ಪ್ರಕಾರ, ಮೇ ತಿಂಗಳಲ್ಲಿ ಅತ್ಯಾಚಾರ ನಡೆದಿದೆ. ಆರೋಪಿಯು ಬಾಲಕಿಯನ್ನು ತನ್ನ ಮನೆಗೆ ಕರೆದು ಅತ್ಯಾಚಾರ ಎಸಗಿದ್ದಾನೆ. ಆಕೆ ಗರ್ಭಿಣಿಯಾಗಿದ್ದು ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಬಂಧನ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹಿಂಸಾತ್ಮಕ ಬಾಲಾಪರಾಧ ಹೆಚ್ಚಳ
ದೇಶದಲ್ಲಿ ಬಾಲಕರು ಅತ್ಯಾಚಾರ ಸೇರಿದಂತೆ ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಸದ್ಯ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಚಿಪ್ಸ್ ವಿಚಾರಕ್ಕೆ 13 ವರ್ಷದ ಬಾಲಕ 15 ವರ್ಷದ ಬಾಲಕಿಗೆ ಚಾಕುವಿನಿಂದ ಇರಿದಿದ್ದಾನೆ. ಚೆನ್ನೈನಲ್ಲಿ 13 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದ 12 ಮಂದಿಯಲ್ಲಿ 7 ಮಂದಿ ಅಪ್ರಾಪ್ತರು.
2017ಕ್ಕೆ ಹೋಲಿಸಿದರೆ 2022ರವರೆಗೆ ಬಾಲಾಪರಾಧಿಗಳ ಸಂಖ್ಯೆಯು 37,402 ರಿಂದ 33,261ಕ್ಕೆ ಇಳಿಕೆಯಾಗಿದೆ. 2016ರಲ್ಲಿ, ಬಂಧಿತರಾದ ಎಲ್ಲಾ ಬಾಲಾಪರಾಧಿಗಳಲ್ಲಿ ಶೇಕಡ 32.5ರಷ್ಟು ಮಂದಿ ಹಿಂಸಾತ್ಮಕ ಅಪರಾಧಗಳನ್ನು ಮಾಡಿದವರು. 2022ರ ಹೊತ್ತಿಗೆ ಹಿಂಸಾತ್ಮಕ ಅಪರಾಧದ ಪ್ರಮಾಣ ಶೇಕಡ 49.5ಕ್ಕೆ ಏರಿಕೆಯಾಗಿದೆ. ಅಂದರೆ ಅಪರಾಧ ಕೃತ್ಯದಲ್ಲಿ ಕಾನೂನು ಸಂಘರ್ಷದಲ್ಲಿದ್ದ ಅರ್ಧದಷ್ಟು ಬಾಲಾಪರಾಧಿಗಳು ಹಿಂಸಾತ್ಮಕ ಅಪರಾಧಗಳನ್ನು ಮಾಡಿ ಬಂಧನಕ್ಕೆ ಒಳಗಾಗಿದ್ದಾರೆ.

ಬಾಲ ನ್ಯಾಯ (ರಕ್ಷಣೆ ಮತ್ತು ಪೋಷಣೆ) ಕಾಯಿದೆ 2015ರ ಪ್ರಕಾರ ಯಾವುದೇ ಮಕ್ಕಳು ಅಪರಾಧ ಮಾಡಿದಲ್ಲಿ ಅವರನ್ನು *ಬಾಲಾಪರಾಧಿ* ಎಂದು ಹೇಳುವುದಿಲ್ಲ, ಈ ಪದ ಬಳಸುವುದು ಈ ಕಾಯ್ದೆಯ ಪ್ರಕಾರ ತಪ್ಪಾಗುತ್ತದೆ. ಆದುದರಿಂದ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಗು( ಬಾಲಕ) ಎನ್ನುವ ಪದ ಬಳಸುವುದು ಸೂಕ್ತ.
ಧನ್ಯವಾದಗಳು..!!