ಗುಂಡು ಹಾರಿಸುವ ಅಭ್ಯಾಸವನ್ನು ಮಾಡುವ ಸಂದರ್ಭದಲ್ಲಿ ಫೀಲ್ಡ್ ಗನ್‌ನಿಂದ ಶೆಲ್ ಸ್ಪೋಟಗೊಂಡು ಇಬ್ಬರು ಅಗ್ನಿವೀರರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆರ್ಟಿಲರಿ ಸೆಂಟರ್‌ನಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ನಾಸಿಕ್ ರಸ್ತೆ ಪ್ರದೇಶದ ಆರ್ಟಿಲರಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಅಗ್ನಿವೀರರನ್ನು ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ ಶಿತ್ (21) ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಕಾಂಗ್ರೆಸ್ ಕಡೆಗೆ ಬೀಸಲಿದೆ ಬಹುಮತದ ಬಿರುಗಾಳಿ…
ಅಗ್ನಿವೀರರ ತಂಡವು ಭಾರತೀಯ ಫೀಲ್ಡ್ ಗನ್‌ನಿಂದ ಗುಂಡು ಹಾರಿಸಿ ಅಭ್ಯಾಸ ಮಾಡುತ್ತಿದ್ದಾಗ ಒಂದು ಶೆಲ್ ಸ್ಪೋಟಗೊಂಡಿದೆ ಎಂದು ವರದಿಯಾಗಿದೆ.
ಇಬ್ಬರಿಗೂ ಕೂಡಾ ಗಾಯಗಳಾಗಿದ್ದು, ಅವರನ್ನು ಡಿಯೋಲಾಲಿಯ ಎಂಎಚ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಪರೀಕ್ಷಿಸಿ ಅಗ್ನಿವೀರರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹವಾಲ್ದಾರ್ ಅಜಿತ್ ಕುಮಾರ್ ನೀಡಿದ ದೂರಿನ ಮೇರೆಗೆ ದೇವಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
