ಭಾರೀ ಮಳೆಯ ನಡುವೆಯೂ ಮುಂಬೈನಲ್ಲಿ ಗೋಕುಲಾಷ್ಟಮಿ ಸಂಭ್ರಮದ ಭಾಗವಾಗಿ ನಡೆದ ಸಾಂಪ್ರದಾಯಿಕ ಮೊಸರು ಕುಡಿಕೆ ಉತ್ಸವವನ್ನು ವಿವಿಧೆಡೆ ಆಚರಿಸಲಾಯಿತು. ಆದರೆ, ಈ ಉತ್ಸವದಲ್ಲಿ ನಡೆದ ಪ್ರತ್ಯೇಕ ದುರಂತಗಳಲ್ಲಿ ಇಬ್ಬರು ಮೃತಪಟ್ಟು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
39 ವರ್ಷದ ಯುವಕ ಮತ್ತು 14 ವರ್ಷದ ಬಾಲಕ ಮೃತಪಟ್ಟಿದ್ದಾರೆ. ಮಾನವ ಪಿರಮಿಡ್ ರಚನೆಯ ಸಂದರ್ಭದಲ್ಲಿ ಈ ದುರ್ಘಟನೆಗಳು ನಡೆದಿದೆ. ಒಂದು ಘಟನೆಯಲ್ಲಿ, ಟೆಂಪೊದಲ್ಲಿ ಕುಳಿತಿದ್ದ ಬಾಲಕ ಕುಸಿದು ಬಿದ್ದು ಜೀವ ಕಳೆದುಕೊಂಡಿದ್ದಾನೆ. ಮತ್ತೊಂದು ಘಟನೆಯಲ್ಲಿ, ಯುವಕನೊಬ್ಬ ಸ್ನೇಹಿತನ ಮನೆಯ ಬಾಲ್ಕನಿಯಿಂದ ಹಗ್ಗದ ಮೂಲಕ ಕಟ್ಟಿದ್ದ ಮೊಸರು ಕುಡಿಕೆಯನ್ನು ಒಡೆಯಲು ಯತ್ನಿಸುವಾಗ ಜಾರಿ ಬಿದ್ದು ಮೃತಪಟ್ಟಿದ್ದಾನೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?
ಮಹಾನಗರ ಪಾಲಿಕೆ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ರಾತ್ರಿ 9 ಗಂಟೆವರೆಗೆ ಲಭ್ಯವಾದ ಮಾಹಿತಿಯ ಪ್ರಕಾರ, ಥಾಣೆಯಲ್ಲಿ 17, ನವಿ ಮುಂಬೈನಲ್ಲಿ 6 ಮತ್ತು ಕಲ್ಯಾಣ್-ಉಲ್ಲಾಸ್‌ನಗರದಲ್ಲಿ 5 ಜನ ಗಾಯಗೊಂಡಿದ್ದಾರೆ. ಒಟ್ಟು ಗಾಯಾಳುಗಳ ಸಂಖ್ಯೆ 123ಕ್ಕೆ ಏರಿದೆ. ಗಾಯಗೊಂಡವರಲ್ಲಿ 9 ವರ್ಷದ ಬಾಲಕ ಸೇರಿದಂತೆ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಈ ವರ್ಷದ ಉತ್ಸವದ ವಿಶೇಷತೆಯೆಂದರೆ, ಜೋಗೇಶ್ವರಿಯ ಕೊಂಕಣ ನಗರ ಗೋವಿಂದ ತಂಡವು ಥಾಣೆಯಲ್ಲಿ ಸಚಿವ ಪ್ರತಾಪ್ ಸರನಾಯಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 10 ಸ್ತರಗಳ ಮಾನವ ಪಿರಮಿಡ್ ರಚಿಸಿ ಇತಿಹಾಸ ನಿರ್ಮಿಸಿತು. ಇದು ಮೊದಲ ಬಾರಿಗೆ ಒಂದೇ ಕಾರ್ಯಕ್ರಮದಲ್ಲಿ ಮೂರು ಬಾರಿ 10 ಸ್ತರಗಳ ಪಿರಮಿಡ್ ರಚನೆಯಾದ ಸಾಧನೆಯಾಗಿದೆ.