16 ವರ್ಷದ ಬಾಲಕಿಯನ್ನು ಅಪಹರಿಸಿ ಚಲಿಸುತ್ತಿದ್ದ ರೈಲಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ. 20 ವರ್ಷದ ಆರೋಪಿ ಥಾಣೆಯ ಬಾಲಕಿಯನ್ನು ಅಪಹರಿಸಿ ಅಕೋಲಾಕ್ಕೆ ಕರೆದೊಯ್ಯುತ್ತಿದ್ದ ಎಂದು ಹೇಳಲಾಗಿದೆ.
ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಜೂನ್ 30ರಂದು ಬಾಲಕಿಯನ್ನು ಆರೋಪಿ ರೈಲಿನಲ್ಲಿ ಅಕೋಲಾಕ್ಕೆ ಕರೆದೊಯ್ದಿದ್ದಾನೆ. ಚಲಿಸುತ್ತಿದ್ದ ರೈಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಕಲ್ಯಾಣ್‌ನ ಸರ್ಕಾರಿ ರೈಲ್ವೆ ಪೊಲೀಸ್(ಜಿಆರ್‌ಪಿ) ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪಂಢರಿ ಕಾಂಡೆ ಸೋಮವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಪರಾರಿ
ಬಾಲಕಿಯನ್ನು ತನ್ನ ಮನೆಗೆಯೇ ಈ ಆರೋಪಿ ಕರೆದೊಯ್ದಿದ್ದಾನೆ. ಈ ವೇಳೆ ಯುವಕನ ಪೋಷಕರು ಮನೆಯೊಳಗೆ ಬರಲು ಬಿಡದ ಕಾರಣ ಆತ ಆಕೆಯನ್ನು ಅಕೋಲಾ ರೈಲು ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳಿದ್ದಾನೆ ಎಂದು ಹೇಳಲಾಗಿದೆ.
ಅಕೋಲಾ ಜಿಆರ್‌ಪಿ ಸಿಬ್ಬಂದಿ ಬಾಲಕಿಯನ್ನು ನಿಲ್ದಾಣದಲ್ಲಿ ನೋಡಿ ವಿಚಾರಿಸಿದಾಗ ಆಕೆ ಅಪರಾಧದ ಬಗ್ಗೆ ತಿಳಿಸಿದ್ದಾಳೆ. ಅಕೋಲಾದ ಜಿಆರ್‌ಪಿ ‘ಶೂನ್ಯ’ ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ವರ್ಗಾಯಿಸಿದ್ದಾರೆ. ಸದ್ಯ ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 64(ಅತ್ಯಾಚಾರ), 74(ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಕೃತ್ಯ), 137 (ಅಪಹರಣ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯ ಶೋಧ ನಡೆಯುತ್ತಿದೆ.
