ಸಿಂಧೂ ನದಿ ನೀರು ನಿಲ್ಲಿಸಲು 20 ವರ್ಷ ಬೇಕು; ಮೋದಿ ಸರ್ಕಾರ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ: ಶಂಕರಾಚಾರ್ಯ ಸ್ವಾಮೀಜಿ

Date:

  • ಸುರಕ್ಷಿತ ಕಾಶ್ಮೀರದ ನಿಮ್ಮ ಹೇಳಿಕೆಗಳು ಈಗ ಎಲ್ಲಿಗೆ ಹೋಗಿವೆ?
  • 370 ತೆಗೆದುಹಾಕಿದ ನಂತರ ಕಾಶ್ಮೀರದಲ್ಲಿ ಶಾಂತಿಯ ಭರವಸೆಗಳು ಏನಾದವು?

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬೆನ್ನಲ್ಲೇ, ಭಾರತದಿಂದ ನೆರೆಯ ದೇಶಕ್ಕೆ ‘ಒಂದು ಹನಿ ನೀರು’ ಹರಿಯದಂತೆ ಮಾಡುವ, ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಬಳಕೆ ಯೋಜನೆಯನ್ನು ಕೈಬಿಡುವ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ಇದು ಜನರನ್ನು ಮೂರ್ಖರನ್ನಾಗಿ ಮಾಡುವ ಘೋಷಣೆಯಷ್ಟೇ ಎಂದು ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಂಕರಾಚಾರ್ಯ ಸ್ವಾಮಿ, ”ಸಿಂಧೂ ನದಿ ನೀರನ್ನು ನಿಲ್ಲಿಸಲು ಮೋದಿ ಸರ್ಕಾರದ ಬಳಿ ಯಾವುದೇ ವ್ಯವಸ್ಥೆಯಿಲ್ಲ. ನದಿ ನೀರು ಪಾಕಿಸ್ತಾನಕ್ಕೆ ಹರಿದಂತೆ ನಿಲ್ಲಿಸುವ ವ್ಯವಸ್ಥೆ ಸಿದ್ಧಪಡಿಸಲು ಭಾರತಕ್ಕೆ ಕನಿಷ್ಠ 20 ವರ್ಷಗಳು ಬೇಕಾಗುತ್ತದೆ. ಇದರರ್ಥ, ಕೇಂದ್ರ ಸರ್ಕಾರ ಸಾರ್ವಜನಿಕರನ್ನು ಮೂರ್ಖರನ್ನಾಗಿ ಮಾಡುತ್ತಿದೆ” ಎಂದು ಹೇಳಿದ್ದಾರೆ.

”ಪಹಲ್ಗಾಮ್‌ನಲ್ಲಿ ಹಿಂದುಗಳ ಮೇಲಿನ ದಾಳಿಯು ಯೋಜಿತ ಪಿತೂರಿಯ ಭಾಗವಾಗಿದೆ. ಒಬ್ಬರ ಧರ್ಮ ಯಾವುದೆಂದು ಕೇಳಿ, ಬಳಿಕ ಅವರನ್ನು ಕೊಲ್ಲುವುದು ಅನಾಗರಿಕತೆಯ ಸಂಕೇತ. ಇದು ಭಯೋತ್ಪಾದಕರಿಂದ ಯುದ್ಧದ ನೇರ ಎಚ್ಚರಿಕೆಯಾಗಿದೆ. ಸರ್ಕಾರ ಇದನ್ನು ಖಂಡಿಸಬಾರದು ಬದಲಾಗಿ ದಂಡನಾತ್ಮಕ ಕ್ರಮ ಕೈಗೊಳ್ಳಬೇಕು. ಸಿಂಧೂ ನದಿ ನೀರು ಒಪ್ಪಂದವನ್ನು ಕೊನೆಗೊಳಿಸುವ ಮೂಲಕ ಸಾರ್ವಜನಿಕರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ, ಭಯೋತ್ಪಾದಕ ದಾಳಿಗೆ ಕಾರಣರಾದ ವ್ಯಕ್ತಿಯನ್ನು ಗುರುತಿಸಿ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

”ಮೊದಲು ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಳಿಕ, ಗಡಿಯಾಚೆ ಕುಳಿತಿರುವ ಅವರ ನಾಯಕರಿಗೆ ಪಾಠ ಕಲಿಸಲು ಸರ್ಕಾರ ಯುದ್ಧಕ್ಕೆ ಸಿದ್ಧವಾಗಬೇಕು. ದೇಶದ ಜನರು ಸರ್ಕಾರದ ಜೊತೆಗಿದ್ದಾರೆ” ಎಂದು ಹೇಳಿದ್ದಾರೆ.

”ಪಾಕಿಸ್ತಾನಕ್ಕೆ ನದಿ ನೀರು ಸರಬರಾಜು ಸ್ಥಗಿತಗೊಳಿಸುವ ಬಗ್ಗೆ ನಮ್ಮ ಸರ್ಕಾರ ಪದೇ ಪದೇ ಮಾತುಕತೆ ನಡೆಸುತ್ತಿದೆ. ಇದು ನಿಜವಾಗಿಯೂ ಸಾಧ್ಯವೇ? ನೀರು ಸರಬರಾಜು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕುವುದರಿಂದ ಈ ಭಯೋತ್ಪಾದಕ ಚಟುವಟಿಕೆ ನಿಲ್ಲುವುದಿಲ್ಲ. ಈಗಲೇ ನೇರ ಕ್ರಮ ಕೈಗೊಂಡರೆ ಉತ್ತಮ” ಎಂದಿದ್ದಾರೆ.

”ಕೇಂದ್ರದ ಮೋದಿ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದಕರು ಪಹಲ್ಗಾಮ್ ಪ್ರವೇಶಿಸಿ ಪ್ರವಾಸಿಗರನ್ನು ಹೇಗೆ ಗುರಿಯಾಗಿಸಿಕೊಂಡರು? ಸುರಕ್ಷಿತ ಕಾಶ್ಮೀರದ ನಿಮ್ಮ ಹೇಳಿಕೆಗಳು ಈಗ ಎಲ್ಲಿಗೆ ಹೋಗಿವೆ? 370 ತೆಗೆದುಹಾಕಿದ ನಂತರ ಕಾಶ್ಮೀರದಲ್ಲಿ ಶಾಂತಿಯ ಭರವಸೆಗಳು ಏನಾದವು?” ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನಾಯಿಗಳು, ಮುಸ್ಲಿಮರಿಗೆ ಪ್ರವೇಶವಿಲ್ಲ’: ಕೃಷಿ ವಿವಿಯಲ್ಲಿ ದ್ವೇಷದ ಪೋಸ್ಟ್‌

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ದೇಶಾದ್ಯಂತ ಮುಸ್ಲಿಂ ವಿರೋಧಿ ದ್ವೇಷವನ್ನು ಮಾಧ್ಯಮಗಳು,...

ಪಹಲ್ಗಾಮ್ ದಾಳಿ | ಸಂಸತ್ ವಿಶೇಷ ಅಧಿವೇಶನಕ್ಕೆ ಸರ್ಕಾರ ಚಿಂತನೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಲು ಹಾಗೂ ಭಯೋತ್ಪಾದನೆ...

ಪತ್ರಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್‌: ತಮಿಳು ನಟ ಶೇಖರ್ ಗೆ ಚಾಟಿ ಬೀಸಿದ ಸುಪ್ರೀಂ

ಮಹಿಳಾ ಪತ್ರಕರ್ತೆಯ ವಿರುದ್ಧವಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ತಮಿಳು ನಟ, ಮಾಜಿ...

ಪಹಲ್ಗಾಮ್ ಘಟನೆ | ಭದ್ರತಾ ವೈಫಲ್ಯ ಮುಚ್ಚಿ ಹಾಕಲು ಹಿಂದೂ-ಮುಸ್ಲಿಂ ವಿಚಾರ ಮುನ್ನೆಲೆಗೆ: ಸಂತೋಷ್ ಲಾಡ್

"ಪಹಲ್ಗಾಮ್ ಭಯೋತ್ಪಾದಕ ಘಟನೆಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ. ಇದು...