ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ನ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ.
ಮಥುರಾದಿಂದ ಹೇಮಾ ಮಾಲಿನಿ, ಸ್ಮೃತಿ ಇರಾನಿ, ರಾಜ್‌ನಾಥ್ ಸಿಂಗ್ ಹಾಗೂ ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ಅವರಿಗೆ ಕೇರಳದ ತಿರುವನಂತಪುರಂನಿಂದ ಟಿಕೆಟ್ ನೀಡಲಾದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಅಭ್ಯರ್ಥಿಗಳ ಹೆಸರಿಲ್ಲ.
ಮೊದಲ ಪಟ್ಟಿಯಲ್ಲಿ 34 ಕೇಂದ್ರ ಸಚಿವರು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದ್ದಾರೆ. ಟಿಕೆಟ್ ಪಡೆದವರಲ್ಲಿ 28 ಮಹಿಳೆಯರು ಇದ್ದಾರೆ. 195 ಮಂದಿಯಲ್ಲಿ 51 ಮಂದಿ ಉತ್ತರ ಪ್ರದೇಶದವರಿದ್ದಾರೆ. 20 ಪಶ್ಚಿಮ ಬಂಗಾಳ ಹಾಗೂ 5 ದೆಹಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳದಿಂದ 20, ಮಧ್ಯಪ್ರದೇಶದಿಂದ 24, ಗುಜರಾತ್ ಮತ್ತು ರಾಜಸ್ಥಾನದಿಂದ ತಲಾ 15, ಕೇರಳದಿಂದ 12, ತೆಲಂಗಾಣದಿಂದ 9, ಅಸ್ಸಾಂನಿಂದ 11, ಜಾರ್ಖಂಡ್ ಮತ್ತು ಛತ್ತೀಸ್‌ಗಢದಿಂದ ತಲಾ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ದೆಹಲಿಯಿಂದ 5, ಜಮ್ಮು ಕಾಶ್ಮೀರದಿಂದ 2, ಉತ್ತರಾಖಂಡದಿಂದ 3, ಅರುಣಾಚಲ ಪ್ರದೇಶದಿಂದ 2 ಮತ್ತು ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ದಮನ್ ಮತ್ತು ದಿಯುನಿಂದ ತಲಾ 1 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬ್ರ್ಯಾಂಡ್ ಬೆಂಗಳೂರು’ ಬಡವರು ಬದುಕಲು ಯೋಗ್ಯವಾದ ನಗರವೂ ಆಗಲಿ
ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಇದು ಮೂರನೇ ಬಾರಿ. 2014 ರಲ್ಲಿ ಅವರು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದರು ಮತ್ತು 2019 ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಗೆದಿದ್ದರು.
