2024ರ ವರ್ಷವು 1901ರಿಂದೀಚೆಗೆ ದೇಶದಲ್ಲಿ ದಾಖಲಾದ ಅತ್ಯಂತ ಅಧಿಕ ಉಷ್ಣಾಂಶವನ್ನು ಹೊಂದಿರುವ ವರ್ಷವಾಗಿದೆ. ಸರಾಸರಿ ಕನಿಷ್ಠ ತಾಪಮಾನವು ಸರಾಸರಿಗಿಂತ 0.90 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.
2024ರಲ್ಲಿ ದೇಶದಾದ್ಯಂತ ವಾರ್ಷಿಕ ಸರಾಸರಿ ಭೂ ಮೇಲ್ಮೈ ಗಾಳಿಯ ಉಷ್ಣತೆಯು ಸರಾಸರಿಗಿಂತ (1991-2020 ಅವಧಿ) 0.65 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಕೊಂಚ ಹೆಚ್ಚಳಿದೆ ತಾಪಮಾನ : ಹವಾಮಾನ ಇಲಾಖೆ ಮುನ್ಸೂಚನೆ
1901 ಅನ್ನು ಅತ್ಯಂತ ಬೆಚ್ಚಗಿನ ವರ್ಷ ಎಂದು ಕರೆಯಲಾಗುತ್ತಿತ್ತು. ಇದನ್ನು ಮೀರಿ 2016ರಲ್ಲಿ ಸರಾಸರಿ ಭೂ ಮೇಲ್ಮೈ ಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.54 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಾಗಿತ್ತು. ಈಗ ಅದನ್ನೂ ಮೀರಿ 1901ರ ಬಳಿಕ 2024 ದೇಶದಲ್ಲಿ ಅತೀ ಹೆಚ್ಚು ತಾಪಮಾನವಿದ್ದ ವರ್ಷ ಎನಿಸಿಕೊಂಡಿದೆ.
ಯುರೋಪಿಯನ್ ಹವಾಮಾನ ಸಂಸ್ಥೆ ಕೋಪರ್ನಿಕಸ್ ಪ್ರಕಾರ, 2024 ಬಹುಶಃ ದಾಖಲೆಯ ಉಷ್ಣಾಂಶವನ್ನು ಹೊಂದಿದ್ದ ವರ್ಷವಾಗಿದೆ. ವರ್ಲ್ಡ್ ವೆದರ್ ಅಟ್ರಿಬ್ಯೂಷನ್ ಆಂಡ್ ಕ್ಲೈಮೇಟ್ ಸೆಂಟ್ರಲ್ ಎಂಬ ಎರಡು ಗುಂಪುಗಳ ಹವಾಮಾನ ತಜ್ಞರು 2024ರಲ್ಲಿ ಪ್ರಪಂಚದಲ್ಲಿ ಸರಾಸರಿ 41 ದಿನಗಳ ಕಾಲ ಅಪಾಯಕಾರಿ ಶಾಖವಿತ್ತು ಎಂದು ಹೇಳಿದ್ದಾರೆ.
