ಸರಣಿ ವಿವಾಹ ಮಾಡಿಕೊಂಡು 25 ಪುರುಷರನ್ನು ವಂಚಿಸಿರುವ ಆರೋಪದ ಮೇಲೆ 23 ವರ್ಷದ ಯುವತಿಯನ್ನು ರಾಜಸ್ಥಾನ ಪೊಲೀಸರು ಭೋಪಾಲ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮೂಲದ ಅನುರಾಧ ಪಾಸ್ವಾನ್ ಎಂದು ಗುರುತಿಸಲಾಗಿದೆ.
ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿಷ್ಣು ಶರ್ಮಾ ಮತ್ತು ಅವರ ಕುಟುಂಬವನ್ನು ಆರೋಪಿ ಯುವತಿ ವಚಿಸಿ, ಪರಾರಿಯಾದ ಬಳಿಕ ಆಕೆಯ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ವಿಷ್ಣು ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿದ್ದೀರಾ? 200 ವರ್ಷಗಳ ಹಿಂದೆ ವರದಕ್ಷಿಣೆ ವಿರುದ್ಧ ಆದೇಶ ಹೊರಡಿಸಿದ್ದ ದಕ್ಷಿಣ ಭಾರತದ ರಾಣಿ
ಪೊಲೀಸ್ ದೂರು ದಾಖಲಿಸಿದ್ದ ವಿಷ್ಣು, “ಪಪ್ಪು ಮೀನಾ ಎಂಬಾಕೆ ಮದುವೆ ಬ್ರೋಕರ್ ಆಗಿರುವುದಾಗಿ ಹೇಳಿಕೊಂಡು ತಮ್ಮನ್ನು ಭೇಟಿ ಮಾಡಿದ್ದರು. ಆರೋಪಿ ಅನುರಾಧಳೊಂದಿಗೆ ವಿವಾಹ ನಿಶ್ಚಯವಾಗುವಂತೆ ಮಾಡಿದಳು. ಏಪ್ರಿಲ್ 19ರಂದು ಅನುರಾಧ ಮತ್ತು ನಾನು ಸ್ಥಳೀಯ ನ್ಯಾಯಾಲಯದಲ್ಲಿ ವಿವಾಹವಾಗಿದ್ದವು. ಆದರೆ, ಕೆಲವೇ ದಿನಗಳಲ್ಲಿ ಆಕೆ ನಮ್ಮನ್ನು ವಂಚಿಸಿ, ನಗದು, ಆಭರಣಗಳನ್ನು ದೋಚಿ ಪರರಾಗಿದ್ದಾಳೆ” ಎಂದು ಹೇಳಿದ್ದಾರೆ.
“ಸಾಮಾನ್ಯವಾಗಿ ಆಕೆಯ ಗ್ಯಾಂಗ್ ಸದಸ್ಯರು ಮದುವೆಯಾದ 5-7 ದಿನಗಳೊಳಗೆ ರಾತ್ರಿ ವೇಳೆ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ, ನಾನು ಫಾಸ್ಟ್-ಫುಡ್ ಅಂಗಡಿ ನಡೆಸುತ್ತಿದ್ದು, ರಾತ್ರಿ 10:30ರ ಬಳಿಕ ಮನೆಗೆ ಬರುತ್ತಿದ್ದೆ, ಊಟ ಮಾಡಿ, ಟಿವಿ ನೋಡಿ ಮಲಗುವುದರಲ್ಲಿ ತಡ ರಾತ್ರಿ ಆಗುತ್ತಿತ್ತು. ಹೀಗಾಗಿ, ಅವರಿಗೆ, ಆಕೆಯನ್ನು ಕರೆದೊಯ್ಯುವುದು ಆಕೆಯ ತಂಡಕ್ಕೆ ಕಷ್ಟವಾಗಿತ್ತು. ನಮ್ಮನ್ನು ವಂಚಿಸಿ, ಮನೆಯಲ್ಲಿದ್ದ ನಗದು, ಆಭರಣ ದೋಚಿ ಪರಾರಿಯಾಗಲು ಆಕೆಗೆ 13 ದಿನಗಳು ಬೇಕಾಯಿತು. ಅಂದು ರಾತ್ರಿ, ಆಹಾರದಲ್ಲಿ ಏನೋ ಅಮಲು ಪದಾರ್ಥ ಬೆರೆಸಿದ್ದಳು. ನಾವೆಲ್ಲ ನಿದ್ದೆಹೋದ ಆಕೆ ಪರರಾಗಿದ್ದಾಳೆ” ಎಂದು ವಿಷ್ಣು ವಿವರಿಸಿದ್ದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮೀತಾ ಲಾಲ್ ಯಾದವ್, “ಮೇ 3ರಂದು ವಂಚನೆಗೆ ಸಂಬಂಧಿಸಿದಂತೆ ಆರೋಪಿ ಯುವತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಆಕೆಯ ವಿಳಾಸವನ್ನು ಪತ್ತೆ ಮಾಡಿ, ಭೋಪಾಲ್‌ಗೆ ತೆರಳಿದ್ದೆವು. ಆದರೆ, ಆ ವಿಳಾಸ ನಕಲಿಯಾಗಿತ್ತು. ಆದಾಗ್ಯೂ, ಆಕೆಯ ಪತ್ತೆಗಾಗಿ ನಮ್ಮ ತಂಡ ಭೋಪಾಲ್‌ನಲ್ಲಿಯೇ ನೆಲೆಸಿತ್ತು. ಅಂತಿಮವಾಗಿ ಆಕೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹನಿಟ್ರ್ಯಾಪ್ | ಕರ್ನಾಟಕ ರಾಜಕಾರಣ ಕಂಡ ‘ಗಲೀಜುಗಾಥೆ’ಗಳ ಸರಮಾಲೆ
“ಆಕೆಯ ತಂಡವನ್ನು ಹಿಡಿಯಲು ನಮ್ಮ ತಂಡದ ಕಾನ್‌ಸ್ಟೆಬಲ್ ಒಬ್ಬರು ವಧುವಿನ ಹುಡುಕಾಟದಲ್ಲಿ ಇರುವುದಾಗಿ ಸುಳ್ಳು ಹೇಳಿಕೊಂಡು ಭೋಪಾಲ್‌ನಲ್ಲಿ ಉಳಿದಿದ್ದರು. ಕೊನೆಗೆ ವ್ಯಕ್ತಿಯೊಬ್ಬರು ಅನುರಾಧಾ ಫೋಟೋ ತೋರಿಸಿ ವಿವಾಹ ಮಧ್ಯಸ್ಥಿಕೆ ನಡೆಸಿದರು. ಅದಾದ ಬಳಿಕ ಆಕೆಯನ್ನು ಹುಡುಕಿದೆವು. ಆಕೆ ಐದು-ಏಳು ದಿನಗಳ ಹಿಂದಷ್ಟೇ ಗಬ್ಬರ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಳು. ಆತನಿಗೂ ಕೂಡಾ ವಂಚಿಸುವ ಸಂಚು ರೂಪಿಸಿದ್ದಳು” ಎಂದು ವಿವರಿಸಿದ್ದಾರೆ.
ವಿಚಾರಣೆ ವೇಳೆ, ಈವೆರೆಗೆ 25 ಪುರುಷರನ್ನು ಮದುವೆಯಾಗಿ ವಂಚಿಸಿರುವುದಾಗಿ ಆರೋಪಿ ಯುವತಿ ಮತ್ತು ಆಕೆಯ ತಂಡ ಒಪ್ಪಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಸಂಜೆ ಭೋಪಾಲ್‌ನಲ್ಲಿ ಆಕೆಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಪೊಲೀಸರು ಆಕೆಯ ಸಹಚರರ ಹುಡುಕಾಟ ನಡೆಸುತ್ತಿದ್ದಾರೆ.

ಇಂಗ್ಲೀಷನ್ನು ಹಾಗೇ ಎತ್ತಿ ಕನ್ನಡಕ್ಕೆ ಅನುವಾದ ಮಾಡೋದಲ್ಲ. ಇಷ್ಟು ದೊಡ್ಡ ಹೆಸರಿನ ಪತ್ರಿಕೆಯ ಕನ್ನಡ ನ್ಯೂಸನ್ನು ಓದೋದಕ್ಕಾಗಲ್ಲ. ಅಷ್ಟೂಂದು ತಪ್ಪುಗಳು. ಅರ್ಥವೇ ಇಲ್ಲದ ಶಬ್ದ, ವಾಕ್ಯಗಳು. ಮೊದಲು ಕನ್ನಡವನ್ನು ಸರಿಯಾಗಿ ಬರೆಯಿರಿ.
1000% nija heludri