ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಶಂಕರರಾವ್ ಚವ್ಹಾಣ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ.
ಔಷಧಿ ಕೊರತೆ ಹಾಗೂ ಮುಂತಾದ ಕಾರಣದಿಂದ ಸಾವು ಸಂಭವಿಸಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಾವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಿವಿಧ ಕಾಯಿಲೆ, ಹಾವು ಕಡಿತ, ಔಷಧಿ ಹಾಗೂ ಸಿಬ್ಬಂದಿ ಕೊರತೆಯಿಂದ ಬಹತೇಕರು ಸಾವನಪ್ಪಿದ್ದಾರೆ ಎಂದು ಆಸ್ಪತ್ರೆಯ ಡೀನ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಹಾರದ ಜಾತಿ ಗಣತಿಯನ್ನು ಸ್ವಾಗತಿಸಿದ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’
“ನಮ್ಮದು ತೃತೀಯ ಹಂತದ ಆರೈಕೆ ಕೇಂದ್ರವಾಗಿದ್ದು, 70 ರಿಂದ 80 ಕಿಮೀ ವ್ಯಾಪ್ತಿಯಲ್ಲಿರುವ ಏಕೈಕ ಸ್ಥಳವಾಗಿದೆ. ಆದ್ದರಿಂದ, ರೋಗಿಗಳು ದೂರದ ಸ್ಥಳಗಳಿಂದ ನಮ್ಮ ಬಳಿಗೆ ಬರುತ್ತಾರೆ. ಕೆಲವು ದಿನಗಳಲ್ಲಿ, ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಇದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಆಸ್ಪತ್ರೆಯ ಸಾಮರ್ಥ್ಯ 500 ಹಾಸಿಗೆಗಳಿದ್ದು ಆದರೆ 1,200 ರೋಗಿಗಳು ಬಂದಿರುವುದೇ ಇದಕ್ಕೆ ಕಾರಣ ಎಂದು ಡೀನ್ ತಿಳಿಸಿದ್ದಾರೆ.
ಘಟನೆಗೆ ತ್ರಿಪಲ್ ಇಂಜಿನ್ ಸರ್ಕಾರವೇ ಕಾರಣ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ ಹಾಗೂ ಉದ್ಧವ್ ನೇತೃತ್ವದ ಶಿವಸೇನಾ ಆರೋಪಿಸಿದೆ.