26 ವರ್ಷದ ದಲಿತ ಮಹಿಳೆಯೊಬ್ಬರನ್ನು ಹೀನಾಯವಾಗಿ ಥಳಿಸಿ, ಅರೆಬೆತ್ತಲೆ ಮಾಡಿ ರಾತ್ರಿಯಿಡೀ ಮರಕ್ಕೆ ಕಟ್ಟಿಹಾಕಿದ ಆಘಾತಕಾರಿ ಘಟನೆ ರಾಂಚಿ ಜಿಲ್ಲಾ ಕೇಂದ್ರ ಗಿರಿದಿಹ್‌ನಿಂದ ಸುಮಾರು 70 ಕಿಮೀ ದೂರದಲ್ಲಿರುವ ಸರಿಯಾ ಎಂಬಲ್ಲಿ ಬುಧವಾರ (ಜುಲೈ 28) ರಾತ್ರಿ ನಡೆದಿದೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಬೆಳಗ್ಗೆ ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಮಹಿಳೆಯನ್ನು ರಕ್ಷಿಸಿದೆ.
ಮಹಿಳೆ ನೀಡಿರುವ ದೂರಿನ ಪ್ರಕಾರ, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಬರುವಂತೆ ಅಪರಿಚಿತರಿಂದ ಆಕೆಯ ಮೊಬೈಲ್‌ಗೆ ಕರೆ ಬಂದಿದೆ. ಮಹಿಳೆ ಹೊರಗೆ ಬಂದಾಗ ಸ್ಕೂಟಿಯಲ್ಲಿ ಬಂದ ಇಬ್ಬರು ಯುವಕರು ಆಕೆಗಾಗಿ ಕಾಯುತ್ತಿದ್ದರು. ಮನೆಯಿಂದ ಹೊರಗೆ ಬಂದ ನಂತರ ಆಕೆಯನ್ನು ಬಲವಂತವಾಗಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಬಟ್ಟೆ ಹರಿದು ಮರಕ್ಕೆ ಕಟ್ಟಿ ಹಾಕಿದರು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭೀಮಾ ಕೋರೆಗಾಂವ್ ಪ್ರಕರಣ: ಸಾಮಾಜಿಕ ಹೋರಾಟಗಾರರಾದ ಗೊನ್ಸಾಲ್ವಸ್, ಫೆರೇರಾಗೆ ಜಾಮೀನು
“ಅವರು ನನ್ನ ಬಾಯಿ ಕಟ್ಟಿ ಮನಬಂದಂತೆ ಥಳಿಸಿದರು. ನನ್ನ ಬಟ್ಟೆಗಳನ್ನು ಹರಿದು, ನನ್ನನ್ನು ಮರಕ್ಕೆ ಕಟ್ಟಿ ಬಿಟ್ಟು ಹೋದರು. ನಾನು ಇಡೀ ರಾತ್ರಿ ಅರೆಬೆತ್ತಲೆ ಸ್ಥಿತಿಯಲ್ಲಿಯೇ ಇದ್ದೆ. ಬೆಳಿಗ್ಗೆ ನನ್ನನ್ನು ನೋಡಿದ ಕೆಲವು ಜನರಿಗೆ ಮರದಿಂದ ಬಿಡಿಸಲು ಮನವಿ ಮಾಡಿದೆ. ಆದರೆ ಅವರ್ಯಾರೂ ನನ್ನನ್ನು ಬಿಡಿಸದೆ ಪೊಲೀಸರಿಗೆ ದೂರು ನೀಡಿದರು. ನನ್ನ ಬಟ್ಟೆ ಸಂಪೂರ್ಣವಾಗಿ ಹರಿದು ಹೋಗಿದ್ದರಿಂದ ಪೊಲೀಸರು ಬೇರೆ ಬಟ್ಟೆಯನ್ನು ನೀಡಿ ಆಸ್ಪತ್ರೆಗೆ ದಾಖಲಿಸಿದರು” ಎಂದು ಮಹಿಳೆ ತಿಳಿಸಿದ್ದಾರೆ.
ಮಹಿಳೆಯನ್ನು ಕಟ್ಟಿನಿಂದ ಬಿಡಿಸಿ ಸ್ಥಳೀಯ ಗಿರಿದಿಹ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸಹಜವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಶ್ ಸೋನಾರ್, ಶ್ರವಣ್ ಕುಮಾರ್, ರೇಖಾ ದೇವಿ ಮತ್ತು ಮುನ್ನಿ ದೇವಿ ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ ತಿಳಿಸಿದ್ದಾರೆ.
ಭಯಂಕರ ರಾಷ್ಟ್ರವಾದಿಗಳು ಮತ್ತು ನಕಲಿ ದೇಶಭಕ್ತರು ಸಂತ್ರಸ್ತೆಗೆ ನ್ಯಾಯ ಒದಗಿಸಲು ಹೋರಾಟ ಮಾಡುವರಾ