ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವ ರೈತರಿಗೆ ವಿಧಿಸಲಾಗುವ ದಂಡವನ್ನು ಕೇಂದ್ರ ಸರ್ಕಾರ ದ್ವಿಗುಣಗೊಳಿಸಿದೆ. ಈ ಹಿಂದೆ, ಕೃಷಿ ತ್ಯಾಚ್ಯಗಳನ್ನು ಸುಡುವ ರೈತರಿಗೆ ಗರಿಷ್ಠ 15,000 ರೂ. ದಂಡ ವಿಧಿಸಲಾಗುತ್ತಿತ್ತು. ಇದೀಗ, 30,000 ರೂ.ಗೆ ಏರಿಕೆ ಮಾಡಿದೆ.
ದೆಹಲಿಯ ಎನ್‌ಸಿಆರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಅಂತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. ದೆಹಲಿ ಮತ್ತು ಸುತ್ತಮುತ್ತ ಗಾಳಿ ಹೆಚ್ಚು ಮಾಲಿನ್ಯಗೊಳ್ಳಲು ರೈತರು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹೆಚ್ಚುವುದೇ ಪ್ರಮುಖ ಕಾರಣವೆಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ, ದಂಡದ ಮೊತ್ತವನ್ನು ದ್ವಿಗುಣಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.
ಕೃಷಿ ತ್ಯಾಜ್ಯಗಳನ್ನು ಸುಡುವ ರೈತರಿಗೆ ಪರಿಸರ ಪರಿಹಾರವೆಂದು ದಂಡ ವಿಧಿಸಲಾಗುತ್ತದೆ. ಕೇಂದ್ರದ ಹೊಸ ನಿಯಮಗಳ ಪ್ರಕಾರ, ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು 5,000 ರೂ. ದಂಡ ಪಾವತಿಸಬೇಕಾಗುತ್ತದೆ. ಎರಡು ಎಕರೆಯಿಂದ ಐದು 10 ಎಕರೆ ಜಮೀನು ಹೊಂದಿರುವ ರೈತರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ, 10 ಎಕರೆಗಿಂತ ಹೆಚ್ಚು ಭೂಮಿ ಹೊಂದಿದ್ದರೆ, ಅಂತಹ ರೈತರಿಗೆ 30,000 ರೂ. ದಂಡ ವಿಧಿಸಲಾಗುತ್ತದೆ.