ದೇಶವನ್ನೇ ಬೆಚ್ಚಿ ಬೀಳಿಸಿದ್ದ 1984ರ ಮಧ್ಯ ಪ್ರದೇಶದ ಭೋಪಾಲ್ ಅನಿಲ ದುರಂತ ನಡೆದ 40 ವರ್ಷಗಳ ಬಳಿಕ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸ್ಥಳದಲ್ಲಿ ಸಂಗ್ರಹವಾಗಿರುವ ಸುಮಾರು 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸ್ಥಳಾಂತರಗೊಳಿಸಲಾಯಿತು.
1984 ರಲ್ಲಿ ಸಂಭವಿಸಿದ ಭೀಕರ ಅನಿಲ ದುರಂತವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ಅನಿಲ ಸೋರಿಕೆಯ ಪರಿಣಾಮ ಸುಮಾರು 6 ಲಕ್ಷ ಮಂದಿ ನಾನಾ ರೀತಿಯ ಕಾಯಿಲೆಗೆ ತುತ್ತಾಗಿದ್ದರು. ಅದೇ ಸಮಯದಲ್ಲಿ, 40 ವರ್ಷಗಳಿಂದ ಯೂನಿಯನ್ ಕಾರ್ಬೈಡ್ ಮತ್ತು ಡೌ ಕೆಮಿಕಲ್ ಕಾರ್ಖಾನೆಗಳಲ್ಲಿ ಬಿದ್ದಿರುವ ರಾಸಾನಿಕ ತ್ಯಾಜ್ಯವು ಭೋಪಾಲ್‌ನ ಹವಾಮಾನವನ್ನೂ ಕಲುಷಿತಗೊಳಿಸುತ್ತಿತ್ತು. ಪರಿಣಾಮ ಕಾರ್ಖಾನೆಯ ಸುತ್ತಲಿನ ಮಣ್ಣು, ಅಂತರ್ಜಲ ಕೂಡ ಕಲುಷಿತವಾಗತೊಡಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ಡಿಸೆಂಬರ್ 3 ರಂದು, ಮಧ್ಯಪ್ರದೇಶ ಹೈಕೋರ್ಟ್ ವಿಷಕಾರಿ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ನಾಲ್ಕು ವಾರಗಳ ಗಡುವನ್ನು ನೀಡಿತು. ಅಲ್ಲದೆ ಡಿಸೆಂಬರ್ 5 ರಂದು ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿತ್ತು. ಘಟನೆ ನಡೆದು ನಲ್ವತ್ತು ವರ್ಷಗಳು ಕಳೆದರೂ ಇನ್ನು ವಿಷಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡದಿರುವುದು ದುರಂತ ಈ ವಿಷಕಾರಿ ತ್ಯಾಜ್ಯಗಳು ಭೂಮಿ ಮೇಲೆ ಇದ್ದರೆ ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸಬಹುದು ಎಂದು ಹೈಕೋರ್ಟ್ ಸರಕಾರಕ್ಕೆ ಛೀಮಾರಿ ಹಾಕಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ದಲಿತ ಅಸ್ಮಿತೆಯ ಕತೆಯನ್ನು ಬಲ್ಲಿರಾ?
ಬಳಿಕ ವಿಚಾರ ಹೈಕೋರ್ಟ್‌ನ ಆದೇಶದ ಮೇರೆಗೆ ಸುಮಾರು 40 ವರ್ಷಗಳ ಬಳಿಕ ಈ ತ್ಯಾಜ್ಯವನ್ನು ಭೋಪಾಲ್‌ನಿಂದ 250 ಕಿ.ಮೀ. ದೂರವಿರುವ ಕೈಗಾರಿಕಾ ಪ್ರದೇಶವಾದ ದಾರ್ ಜಿಲ್ಲೆಯ ಪೀತಂಪುರಕ್ಕೆ ಸುಮಾರು ಹನ್ನೆರಡು ಟ್ರಕ್‌ಗಳ ಮೂಲಕ ಬುಧವಾರ ಸಾಗಿಸಲಾಗಿದೆ.
ಸುಮಾರು 40 ವರ್ಷಗಳಿಂದ ಕೈಗಾರಿಕಾ ಪ್ರದೇಶದಲ್ಲಿ ಬಿದ್ದಿದ್ದ 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜಗಳನ್ನು ಸುರಕ್ಷತಾ ಮಾನದಂಡಗಳನ್ನು(ಪಿಪಿಇ ಕಿಟ್) ಅನುಸರಿಸುವ ಮೂಲಕ ಸುಮಾರು 200 ಕಾರ್ಮಿಕರನ್ನು ಬಳಸಿಕೊಂಡು ತ್ಯಾಜ್ಯವನ್ನು ಸಂಗ್ರಹ ಮಾಡಲಾಗಿದ್ದು ಅದಕ್ಕಾಗಿ ಸುಮಾರು ಹನ್ನೆರಡು ಕಂಟೈನರ್‌ಗಳನ್ನು ಬಳಸಲಾಗಿದೆ. ಜೊತೆಗೆ ಪೊಲೀಸ್ ಭದ್ರತೆಯನ್ನು ಒದಗಿಸುವ ಮೂಲಕ ಬುಧವಾರ ಭೋಪಾಲ್‌ನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಪೀತಂಪುರಕ್ಕೆ ಕೊಂಡೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.