ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ.
ಬೆಳಿಗ್ಗೆ 7:27ರ ಸುಮಾರಿಗೆ ಕಂಪನ ಸಂಭವಿಸಿದೆ. ಭೂಕಂಪನ ಕೇಂದ್ರಬಿಂದು ಮುಲುಗು ಪ್ರದೇಶದಲ್ಲಿ 40 ಕಿಮೀ ಆಳದಲ್ಲಿದೆ ಎಂದು ಎಕ್ಸ್ ಖಾತೆ ಮೂಲಕ ಎನ್‌ಸಿಎಸ್ ಮಾಹಿತಿ ನೀಡಿದೆ.
ಇದನ್ನು ಓದಿದ್ದೀರಾ? ಬೀದರ್ ಜಿಲ್ಲೆಯಲ್ಲಿ ಲಘು ಭೂಕಂಪನ; ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆ ದಾಖಲು
ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ಈವರೆಗೆ ವರದಿಯಾಗಿಲ್ಲ. ಭೂಕಂಪದ ಪರಿಣಾಮದ ಬ್ಗಗೆ ಅಧಿಕ ವಿವರ ಇನ್ನಷ್ಟೇ ಅಧಿಕಾರಿಗಳಿಗೆ ಲಭ್ಯವಾಗಬೇಕಿದೆ.
ನವೆಂಬರ್ 28ರಂದು, ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭೂಮಿ ಕಂಪಿಸಿತ್ತು.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ “ಅಫ್ಘಾನಿಸ್ತಾನದಲ್ಲಿ ನಿನ್ನೆ ಸಂಜೆ 4:20ರ ಸುಮಾರಿಗೆ ಸಂಭವಿಸಿದೆ.
