ಪಂಜಾಬ್‌ನ ಜಲಂಧರ್ ಪೊಲೀಸರು ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಲಾಂಡಾನ ಐವರು ಸಹಾಯಕರನ್ನು ಸುಲಿಗೆ, ಕೊಲೆ ಮತ್ತು ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಿದ್ದಾರೆ. ಹಾಗೆಯೇ 15 ದಿನಗಳ ಕಾರ್ಯಾಚರಣೆಯಲ್ಲಿ ಐದು ವಿದೇಶಿ ವಿಸ್ತೂಲು ವಶಪಡಿಸಿಕೊಂಡಿದ್ದಾರೆ.
“ಕಮಿಷನರೇಟ್ ಪೊಲೀಸ್ ಜಲಂಧರ್ 15 ದಿನಗಳ ಕಾರ್ಯಾಚರಣೆಯಲ್ಲಿ ಕೆನಡಾ ಮೂಲದ ಲಖ್ಬೀರ್ ಲಾಂಡಾ ಗ್ಯಾಂಗ್‌ನ ಐವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ” ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಭಾನುವಾರ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
“ಅವರು ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ, ಕೊಲೆ, ಸುಲಿಗೆ, ಮತ್ತು ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಅನೇಕ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. 5 ವಿದೇಶಿ ನಿರ್ಮಿತ ಪಿಸ್ತೂಲ್‌ಗಳು ವಶಕ್ಕೆ ಪಡೆಯಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ‘ನೀವು ಎಷ್ಟು ದೌರ್ಜನ್ಯ ಮಾಡಿದರೂ ಅರವಿಂದ್ ಕೇಜ್ರಿವಾಲ್ ತಲೆಬಾಗಲ್ಲ’ ಎಂದ ಪಂಜಾಬ್ ಸಿಎಂ
“ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿರ್ದೇಶನದಂತೆ ರಾಜ್ಯದಲ್ಲಿ ಸಂಘಟಿತ ಅಪರಾಧಗಳನ್ನು ನಿರ್ಮೂಲನೆ ಮಾಡಲು ಪಂಜಾಬ್ ಪೊಲೀಸರು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಕೂಡಾ ಡಿಜಿಪಿ ಹೇಳಿದರು.
In a major breakthrough, Commissionerate Police Jalandhar arrests five operatives of Canada-based Lakhbir Landa Gang in a 15-Day Operation
They were involved in Arms and Drug smuggling across the border, multiple heinous crimes such as murder, extortion, ransom and many other… pic.twitter.com/LpV69zEl8i
— DGP Punjab Police (@DGPPunjabPolice) June 30, 2024
ಕಳೆದ ವರ್ಷ ಡಿಸೆಂಬರ್‌ನಲ್ಲಿ ಗೃಹ ಸಚಿವಾಲಯ ಲಖ್ಬೀರ್ ಲಾಂಡಾನನ್ನು ಭಯೋತ್ಪಾದಕ ಎಂದು ಘೋಷಿಸಿದೆ. 33 ವರ್ಷದ ಲಖ್ಬೀರ್ ಲಾಂಡಾ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ಗೆ (ಬಿಕೆಐ) ಸೇರಿದ್ದು, 2021ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಭಾಗಿಯಾಗಿದ್ದನು.
ಡಿಸೆಂಬರ್ 2022ರಲ್ಲಿ ತರ್ನ್ ತರನ್‌ನಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ ಆರ್‌ಪಿಜಿ ದಾಳಿಗೆ ಸಂಬಂಧಿಸಿದಂತೆ ಲಖ್ಬೀರ್ ಲಾಂಡಾ ಹೆಸರು ಕೂಡಾ ಕೇಳಿಬಂದಿತ್ತು. ಭಯೋತ್ಪಾದಕ ಪಂಜಾಬ್‌ಗೆ ಸೇರಿದವನಾದರೂ ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾನೆ. ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುವಲ್ಲಿ ತೊಡಗಿದ್ದಾನೆ ಎಂಬ ಆರೋಪವಿದೆ.