ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಆರು ವರ್ಷದ ಬಾಲಕ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ರೇವಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್, “ಆರು ವರ್ಷದ ಬಾಲಕ ಬಿದ್ದು ಪ್ರಸ್ತುತ ಸಿಕ್ಕಿಬಿದ್ದಿರುವ ಈ ಬೋರ್‌ವೆಲ್ 6 ಸೆಂಟಿ ಮೀಟರ್ ವ್ಯಾಸವನ್ನು ಹೊಂದಿದೆ” ಎಂದು ಮಾಹಿತಿ ನೀಡಿದ್ದಾರೆ.
“ಬಾಲಕ ತನ್ನ ಸ್ನೇಹಿತರೊಂದಿಗೆ ಕಟಾವು ಮಾಡಿದ ಗೋಧಿ ಹೊಲದಲ್ಲಿ ಆಟವಾಡುತ್ತಿದ್ದನು, ಈ ಸಮಯದಲ್ಲಿ ಅವನು ಬೋರ್‌ವೆಲ್‌ಗೆ ಬಿದಿದ್ದಾನೆ. ಇತರ ಮಕ್ಕಳು ಬಾಲಕನನ್ನು ಮೇಲೆತ್ತಲು ಪ್ರಯತ್ನಿಸಿದ್ದು ಸಾಧ್ಯವಾಗದಿದ್ದಾಗ, ತಕ್ಷಣವೇ ಬಾಲಕನ ಪೋಷಕರಿಗೆ ಮಾಹಿತಿ ನೀಡಿದರು” ಎಂದು ತಿಳಿಸಿದ್ದಾರೆ.
#WATCH | Rewa, Madhya Pradesh: A 6-year-old child fell in an open borewell.
Rewa Additional SP Anil Sonkar says, “… The name of the boy is Mayur. He, along with his friends were playing in the fields on harvested wheat crops, during which he fell in the borewell. The other… pic.twitter.com/ZVA307s9Tv
— ANI MP/CG/Rajasthan (@ANI_MP_CG_RJ) April 13, 2024
“ಬಾಲಕನ ಪೋಷಕರು ಪೊಲೀಸರು ಮತ್ತು ಆಡಳಿತಕ್ಕೆ ಮಾಹಿತಿ ನೀಡಿದ್ದು ತಕ್ಷಣ ಠಾಣೆಯ ಉಸ್ತುವಾರಿ ಹಾಗೂ ಎಸ್‌ಡಿಎಂ ಸ್ಥಳಕ್ಕೆ ಆಗಮಿಸಿದರು. ಮಧ್ಯಾಹ್ನ 3.30ರ ವೇಳೆಗೆ ಈ ಘಟನೆ ಸಂಭವಿಸಿದ್ದು ಸ್ಥಳದಲ್ಲಿ ಎಲ್ಲ ಹಿರಿಯ ಅಧಿಕಾರಿಗಳು ಹಾಜರಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕೊಳವೆಬಾವಿ ದುರಂತ | ಸತತ 18 ಗಂಟೆ ನಿರಂತರ ಕಾರ್ಯಾಚರಣೆಯ ನಂತರ ಬಾಲಕನ ರಕ್ಷಣೆ
“2 ಜೆಸಿಬಿಗಳು, ಕ್ಯಾಮರಾಮನ್‌ಗಳ ತಂಡ ಮತ್ತು ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯ ನಡೆಸುತ್ತಿದೆ. ಬನಾರಸ್‌ನಿಂದ ಎನ್‌ಡಿಆರ್‌ಎಫ್ ತಂಡವನ್ನು ಕಳುಹಿಸಲಾಗಿದೆ ಮತ್ತು ಅವರು ಶೀಘ್ರದಲ್ಲೇ ಇಲ್ಲಿಗೆ ಬರಲಿದ್ದಾರೆ” ಎಂದು ತಿಳಿಸಿದರು.
ಇತ್ತೀಚೆಗೆ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು 18 ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ.