ರಸ್ತೆಬಬದಿ ಟ್ಯಾಟೂ ಹಾಕಿಸಿಕೊಂಡ 68 ಮಹಿಳೆಯರಿಗೆ ಎಚ್ ಐ ವಿ ಸೋಂಕು ತಗುಲಿರು ಆಘಾತಕಾರಿ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. ಈ ಮಹಿಳೆಯರು ಪ್ರಸವಪೂರ್ವ ಪರೀಕ್ಷೆಗೆಂದು ಜಿಲ್ಲಾ ಮಹಿಳೆಯರ ಆಸ್ಪತ್ರೆಗೆ ಭೇಟಿ ನೀಡಿದಾಗ ಹೆಚ್‌ಐವಿ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಎಲ್ಲ ಮಹಿಳೆಯರಿಗೂ ಹಚ್ಚೆ ಮೂಲಕ ಹೆಚ್‌ಐವಿ ಸೋಂಕು ತಗುಲಿದ್ದು, ಈ ಮಹಿಳೆಯರು ರಸ್ತೆಬದಿ ಹಚ್ಚೆ ಕಲಾವಿದರಿಂದ ಹಚ್ಚೆ ಹಾಕಿಸಿಕೊಂಡಿದ್ದರು. ಹಚ್ಚೆ ಹಾಕಿಸಿಕೊಂಡ ನಂತರದ ದಿನಗಳಲ್ಲಿ ಆರೋಗ್ಯ ಹದಗೆಟ್ಟಿದ್ದು, ಹೆಚ್‌ಐವಿ ಲಕ್ಷಣಗಳು ಕಂಡುಬಂದಿವೆ.
ಮಹಿಳೆಯರಿಗೆ ಹಚ್ಚೆ ಹಾಕಿದ ಹಚ್ಚೆ ಹಾಕುವ ಕಲಾವಿದೆ ಸೂಚಿಯನ್ನು ಬದಲಾಯಿಸದೆ ಹಲವು ಬಾರಿ ಮರುಬಳಕೆ ಮಾಡಿದ ಕಾರಣದಿಂದ ಹೆಚ್‌ಐವಿ ಸೋಂಕು ಹರಡಿದೆ. ಹಲವಾರು ಬಾರಿ ಒಂದೇ ಸೂಚಿಯನ್ನು ಹಚ್ಚೆಗಾಗಿ ಬಳಸಿದ ಕಾರಣ 68 ಮಹಿಳೆಯರಿಗೆ ಭಯಾನಕ ರೋಗ ತಗುಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
ಹೆಚ್‌ಐವಿ ಸೋಂಕಿಗೆ ಒಳಗಾದ 68 ಮಹಿಳೆಯರು 4 ವರ್ಷದಿಂದ ರೋಗದಿಂದ ಬಳಲುತ್ತಿದ್ದಾರೆ. ಎಲ್ಲ ಸೋಂಕಿತ ಮಹಿಳೆಯರು ಸುರಕ್ಷಿತವಾಗಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹೆಚ್‌ಐವಿ ಹಾಗೂ ಹೆಪಟೈಟಿಸ್ ಸೋಂಕು ಸಾಮಾನ್ಯವಾಗಿ ಸೋಂಕಿತರಿಂದ ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಸೋಂಕಿತ ರಕ್ತ ವರ್ಗಾವಣೆಯಿಂದ ಹರಡುತ್ತದೆ. ಹಾಗೆಯೇ ಸೋಂಕಿತರಿಗೆ ಬಳಸಿದ ಸೂಜಿಯಿಂದಲೂ ರೋಗ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಸೋಂಕನ್ನು ತಡೆಯಲು ಎಚ್ಚರಿಕೆ ಹಾಗೂ ಜಾಗೃತಿ ಅತ್ಯಗತ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2170 ಹೆಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕ ಸೋಂಕಿತರು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವರಾಗಿದ್ದಾರೆ ಎಂದು ಗಾಜಿಯಾಬಾದ್ ಜಿಲ್ಲಾ ಆರೋಗ್ಯ ಕೇಂದ್ರದ ವರದಿ ತಿಳಿಸಿದೆ
