ಎಂಟು ವರ್ಷದ ಬಾಲಕಿಯ ಮೇಲೆ ಆಕೆಯ ಸೋದರಸಂಬಂಧಿಯೇ ಅತ್ಯಾಚಾರ ಎಸಗಿ, ಬಾಲಕಿಯ ಕೊಲೆ ಮಾಡಲು ಯತ್ನಿಸಿರುವ ಘಟನೆ ಜಾರ್ಖಂಡ್‌ನ ಸಿಮ್ದೇಗಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 20 ವರ್ಷದ ಆರೋಪಿ ಕುಡಿದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಲಕಿಗೆ ಸಿಹಿತಿಂಡಿ ನೀಡುವುದಾಗಿ ಪುಸಲಾಯಿಸಿ ಯಾರೂ ಇಲ್ಲದ ಅಂಗನವಾಡಿ ಕೇಂದ್ರವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಮಹಿಳೆಯ ಮೇಲೆ ಅತ್ಯಾಚಾರ; ಬಜರಂಗದಳ ನಾಯಕ ಬಂಧನ
ಕಾಮುಕ ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯ ಕತ್ತು ಹಿಸುಕಿ ಕೊಲ್ಲಲು ಯತ್ನಿಸುತ್ತಿದ್ದ. ಅಷ್ಟರಲ್ಲೇ ಹತ್ತಿರದ ಮಾರ್ಗದಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು ಆತನನ್ನು ತಡೆದಿದ್ದಾರೆ. ಬಾಲಕಿ ಮನೆಗೆ ಹಿಂತಿರುಗಿ ಘಟನೆಯನ್ನು ತನ್ನ ಪೋಷಕರಿಗೆ ತಿಳಿಸಿದ್ದು, ಪೋಷಕರು ಗ್ರಾಮದ ಮುಖ್ಯಸ್ಥ ಮತ್ತು ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿದ್ದು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜಲ್ದೇಗಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಬಿಜೆಪಿ ಮುಖಂಡ; ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಆರೋಪಿ
ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ
ಮಕ್ಕಳ ಹಕ್ಕುಗಳ ಎನ್‌ಜಿಒ CRY ನಡೆಸಿದ ಸಮೀಕ್ಷೆ ಪ್ರಕಾರ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು 2016ರಿಂದ 2022ರವರೆಗೆ ಶೇ. 96ರಷ್ಟು ಏರಿಕೆಯಾಗಿದೆ. 2022ರಲ್ಲಿಯೇ 38,911 ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ನಡೆದಿದೆ. 2021ರಲ್ಲಿ 36,381 ಪ್ರಕರಣಗಳು ದಾಖಲಾಗಿವೆ. ಇದನ್ನು ಹೊರತುಪಡಿಸಿ ದಾಖಲಾಗದ ಅದೆಷ್ಟೋ ಪ್ರಕರಣಗಳಿವೆ. ತಮ್ಮ ಬಾಲ್ಯದ ಜೀವನದ ಆಘಾತದಿಂದ ಹೊರಬರಲಾರದೆ ಇನ್ನೂ ಕೂಡಾ ಹಲವು ಮಹಿಳೆಯರು, ಹೆಣ್ಣು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.
