80 ವರ್ಷದ ವಿಶೇಷ ಚೇತನ ಮಹಿಳೆ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 20ರಂದು ಜಿಲ್ಲೆಯ ಕೊಟ್ಟಾಯಂನಲ್ಲಿ ಘಟನೆ ನಡೆದಿತ್ತು ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಆರೋಪಿ ರಶೀದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ವೆಲಿನೆಲ್ಲೂರ್ ನಿವಾಸಿಯಾಗಿದ್ದು, ಕೊಟ್ಟಾಯಂನಲ್ಲಿ ಅಂಗಡಿ ನಡೆಸುತ್ತಿದ್ದ. ಸಂತ್ರಸ್ತ ಮಹಿಳೆ ಆತನ ಅಂಗಡಿಯ ಬಳಿ ಮಲಗಿದ್ದಾಗ, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ.
ಅಕ್ಟೋಬರ್ 21ರ ಬೆಳಗ್ಗೆ ಸ್ಥಳೀಯರು ಸಂತ್ರಸ್ತೆಯನ್ನು ಕಂಡು, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ. ಭಾನುವಾರ ಆತನನ್ನು ಬಂಧಿಸಿದ್ದಾರೆ.