8ನೇ ವೇತನ ಆಯೋಗ ರಚನೆಗೆ ಕೇಂದ್ರ ಒಪ್ಪಿಗೆ

Date:

Advertisements

ಎಂಟನೇ ವೇತನ ಆಯೋಗ ರಚನೆಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದ್ದು, ಕೇಂದ್ರ ಸರಕಾರಿ ನೌಕರರಿಗೆ ವೇತನ ಹೆಚ್ಚಳಕ್ಕೆ ನಾಂದಿ ಹಾಡಿದೆ.

8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಜನವರಿ 16ರಂದು ಗುರುವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಈ ವಿಷಯ ತಿಳಿಸಿದರು. ಈ ನಿರ್ಧಾರವನ್ನು ಲಕ್ಷಾಂತರ ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರು ಕಾಯುತ್ತಿದ್ದಾರೆ.

ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಸಾಮಾನ್ಯವಾಗಿ 10 ವರ್ಷಗಳಿಗೆ ಒಮ್ಮೆ ವೇತನ ಆಯೋಗವನ್ನು ರಚನೆ ಮಾಡಲಾಗುತ್ತದೆ. ಉದ್ಯೋಗಿಗಳ ವೇತನ ಮತ್ತು ನಿವೃತ್ತರಿಗೆ ಪಾವತಿಸುವ ಪಿಂಚಣಿಗಳ ಪರಿಷ್ಕರಣೆಗೆ ಇದು ಸೂತ್ರಗಳನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ.

Advertisements

ಕೊನೆಯ ಬಾರಿ 2014ರ ಫೆಬ್ರವರಿಯಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ವೇತನ ಆಯೋಗವನ್ನು ರಚನೆ ಮಾಡಿತ್ತು. ಇದು 7ನೇ ವೇತನ ಆಯೋಗ ಆಗಿತ್ತು. ಈ ವೇತನ ಆಯೋಗದ ಶಿಫಾರಸುಗಳನ್ನು 2016ರ ಜನವರಿಯಿಂದ ಕೇಂದ ಸರಕಾರ ಜಾರಿಗೆ ತಂದಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ

2026ರ ಜನವರಿಯಿಂದ ವೇತನವನ್ನು ಪರಿಷ್ಕರಿಸಲು 8 ನೇ ವೇತನ ಆಯೋಗವನ್ನು ಶೀಘ್ರವಾಗಿ ರಚಿಸಬೇಕು ಎಂಬ ಒತ್ತಡ ಜೋರಾಗಿತ್ತು. ನೌಕರರ ಸಂಘಗಳು ಮತ್ತು ಸಿಬ್ಬಂದಿ ಸಂಘಗಳ ನಿರಂತರ ಬೇಡಿಕೆಗಳ ನಡುವೆ ಅಶ್ವಿನಿ ವೈಷ್ಣವ್ ಅವರು ಗುರುವಾರ ಈ ಘೋಷಣೆ ಮಾಡಿದ್ದಾರೆ. ಕೊನೆಯ ವೇತನ ಹೆಚ್ಚಳ 2016ರ ಜನವರಿ 1ರಿಂದ ಜಾರಿಗೆ ಬಂದಿತ್ತು. ಹೀಗಾಗಿ ಮುಂದಿನ ವೇತನ ಪರಿಷ್ಕರಣೆಯನ್ನು ಜನವರಿ 1, 2026ರಿಂದ ಜಾರಿಗೆ ತರಬೇಕಿದೆ.

ಎಂಟನೇ ವೇತನ ಆಯೋಗ ಸ್ಥಾಪನೆಯಾದರೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗಬಹುದು. ಸರ್ಕಾರಿ ನೌಕರರ ಕನಿಷ್ಠ ಸಂಬಳದಲ್ಲಿ ಬರೋಬ್ಬರಿ ಶೇ. 186 ರಷ್ಟು ಏರಿಕೆ ಆಗಬಹುದು.

ಸದ್ಯ ಕನಿಷ್ಠ ಸಂಬಳ 18,000 ರೂ ಇದೆ. 2.86ರ ಫಿಟ್ಮೆಂಟ್ ಫ್ಯಾಕ್ಟರ್​ನಿಂದ ಕನಿಷ್ಠ ಸಂಬಳವು 51,480 ರೂ ಆಗುತ್ತದೆ. ಕನಿಷ್ಠ ಪಿಂಚಣಿಯೂ ಕೂಡ 9,000 ರೂನಿಂದ 25,740 ರೂಗೆ ಹೆಚ್ಚಬಹುದು. ಇದೇ 8ನೇ ವೇತನ ಆಯೋಗದ ಶಿಫಾರಸುಗಳು ವಿವಿಧ ರಾಜ್ಯ ಸರ್ಕಾರಗಳು ತಮ್ಮ ನೌಕರರ ವೇತನ ಪರಿಷ್ಕರಣೆಗೆ ಬಳಸಿಕೊಳ್ಳಬಹುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X