ಕರ್ನಾಟಕದಲ್ಲಿ ಭಾಷಾ ಹೇರಿಕೆಯಿಂದ 90 ಸಾವಿರ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಯಿಳಿ ಆರೋಪಿಸಿದ್ದಾರೆ.
ಚೆನ್ನೈನ ಶಾಲಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾಷಾ ಕಲಿಕೆ ವಿದ್ಯಾರ್ಥಿಗಳ ಆಯ್ಕೆಯಾಗಿರಬೇಕು. ಮೂರನೇ ಭಾಷೆ ಕಡ್ಡಾಯವಲ್ಲ, ಅದು ಒಂದು ಆಯ್ಕೆಯಾಗಿರಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಕೇಂದ್ರ ಸರ್ಕಾರವು ತಮಿಳುನಾಡು ಮತ್ತು ಕೇರಳದಂತಹ ಉತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ಶಿಕ್ಷಣದ ನಿಧಿಯನ್ನು ತಡೆಹಿಡಿಯುತ್ತಿದೆ. ಕೇಂದ್ರ ಸರ್ಕಾರವು ಶಿಕ್ಷಣ ನಿಧಿಯನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯಗಳಿಗೆ ಬೆದರಿಕೆ ಹಾಕುತ್ತಿದೆ. ಆದರೆ ಮುಖ್ಯಮಂತ್ರಿ ಸ್ಟಾಲಿನ್ ಅವರು ಶಿಕ್ಷಣ ನಿಧಿಯ ಪೂರ್ಣ ವೆಚ್ಚವನ್ನು ತಮ್ಮ ರಾಜ್ಯ ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅನ್ಬಿಲ್ ಮಹೇಶ್ ಹೇಳಿದರು.
ಒಂದು ದಿನದ ಹಿಂದಷ್ಟೆ ಭಾಷಾ ವಿಚಾರವಾಗಿ ಮಾತನಾಡಿದ್ದ ಡಿಎಂಕೆ ಸಂಸದೆ ಕನಿಮೋಳಿ, ಹಿಂದಿ ಯಾವುದೇ ಭಾಷೆಯ ಶತ್ರು ಅಲ್ಲದಿದ್ದರೆ, ತಮಿಳು ಕೂಡ ಅಲ್ಲ ಎಂದು ಹೇಳಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಯಾವುದೇ ಭಾಷೆಯ ಶತ್ರುವಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ತಮಿಳು ಕೂಡ ಯಾವುದೇ ಭಾಷೆಯ ಶತ್ರುವಲ್ಲ. ಉತ್ತರ ಭಾರತದ ಜನರು ದಕ್ಷಿಣ ಭಾರತದ ಭಾಷೆಗಳನ್ನು ಕಲಿಯಬೇಕು ಎಂದು ಕನಿಮೋಳಿ ಒತ್ತಾಯಿಸಿದ್ದರು.
“ಹಿಂದಿ ಯಾವುದೇ ಭಾಷೆಯ ಶತ್ರುವಲ್ಲದಿದ್ದರೆ, ತಮಿಳು ಕೂಡ ಯಾವುದೇ ಭಾಷೆಯ ಶತ್ರುವಲ್ಲ. ಅವರು ತಮಿಳನ್ನು ಕಲಿಯಲಿ. ಉತ್ತರ ಭಾರತದ ಜನರು ಕನಿಷ್ಠ ಒಂದು ದಕ್ಷಿಣ ಭಾರತದ ಭಾಷೆಯನ್ನಾದರೂ ಕಲಿಯಲಿ. ಅದೇ ನಿಜವಾದ ರಾಷ್ಟ್ರೀಯ ಏಕೀಕರಣ” ಎಂದು ಕನಿಮೋಳಿ ಹೇಳಿದ್ದರು.
ಇತ್ತೀಚೆಗೆ ಅಮಿತ್ ಶಾ ಅವರು ಹಿಂದಿ ಯಾವುದೇ ಭಾರತೀಯ ಭಾಷೆಯ ವಿರೋಧಿಯಲ್ಲ, ಬದಲಿಗೆ ಎಲ್ಲರ ಸ್ನೇಹಿತ. ದೇಶದಲ್ಲಿ ಯಾವುದೇ ಭಾಷೆಗೆ ವಿರೋಧ ಇರಬಾರದು ಎಂದು ಹೇಳಿದ್ದರು.