- ರಾಜಸ್ಥಾನ ಗ್ರಾಮದಲ್ಲಿ ಮೇ 3ರಂದು ನಿಶ್ಚಯವಾಗಿದ್ದ ವಿವಾಹ
- ಮೇ 15ರಂದು ವಧು ದೊರಕಿದ ನಂತರ ಆಕೆಯೊಂದಿಗೆ ವಿವಾಹ
ರಾಜಸ್ಥಾನ ಗ್ರಾಮವೊಂದರಲ್ಲಿ ವಿವಾಹದ ದಿನದ ಶಾಸ್ತ್ರಗಳು ಆರಂಭವಾದ ನಂತರ ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಮೇಲೆ ವರ ವಧುವಿಗಾಗಿ 13 ದಿನಗಳ ಕಾಲ ಮಂಟಪದಲ್ಲೇ ಕಾದಿದ್ದಾನೆ.
13 ದಿನಗಳ ನಂತರ ಕೊನೆಗೂ ಮಂಟಪಕ್ಕೆ ಆಗಮಿಸಿದ ವಧುವಿನೊಂದಿಗೆ ವಿವಾಹ ನೆರವೇರಿದೆ. ಇಂತಹ ವಿಚಿತ್ರ ಮದುವೆ ಇದೀಗ ರಾಜಸ್ಥಾನ ಸೇರಿದಂತೆ ದೇಶವಿಡೀ ಸುದ್ದಿಯಾಗಿದೆ.
ರಾಜ್ಯದ ಸೈನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇ 3ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ವಧು ಸೃಷ್ಟಿಸಿದ ಗೊಂದಲದಿಂದ ವಿವಾಹ ಮೇ 15ಕ್ಕೆ ನೆರವೇರಿದೆ.
ಆಗಿದ್ದೇನು?
ಮೇ 3ರಂದು ವಿವಾಹ ನೆರವೇರಿಸಲು ನಿಶ್ಚಯಿಸಲಾಗಿದ್ದು, ವಧು, ವರ ಹಾಗೂ ಅವರ ಕುಟುಂಬದವರು ಮದುವೆ ಮಂಟಪಕ್ಕೆ ತಲುಪಿದ್ದರು.
ಮದುವೆ ಶಾಸ್ತ್ರಗಳು ನಡೆಯುತ್ತಿದ್ದಂತೆ ವಧು ಹೊಟ್ಟೆ ನೋವು, ವಾಕರಿಕೆ ಬರುತ್ತಿರುವುದಾಗಿ ಹೇಳಿ ತೆರಳಿದಾಕೆ, ಎಷ್ಟು ಸಮಯವಾದರೂ ಹಿಂತಿರುಗಿ ಬರಲಿಲ್ಲ. ಅನುಮಾನದಿಂದ ವಧುವಿನ ಪೋಷಕರು ಮಂಟಪ ಹುಡುಕಿದರು.
ಸ್ವಲ್ಪ ಸಮಯದ ಬಳಿ ಆಕೆ ತನ್ನ ಪ್ರಿಯಕರನೊಂದಿಗೆ ಮಂಟಪ ಬಿಟ್ಟು ತೆರಳಿರುವುದಾಗಿ ತಿಳಿದು ಬಂದಿದೆ. ಆದರೆ ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು 13 ದಿನಗಳವರೆಗೆ ಮದುವೆ ಮಂಟಪದಲ್ಲೇ ಕುಳಿತಿದ್ದ.
ಈ ಸುದ್ದಿ ಓದಿದ್ದೀರಾ? ಸಂಸತ್ ಭವನ ಉದ್ಘಾಟನೆ ಪಟ್ಟಾಭಿಷೇಕ ಅಲ್ಲ; ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ಟೀಕೆ
ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ನಡೆಸಿದ್ದರು. ರಾಜಸ್ಥಾನ ಪೊಲೀಸರು ಮೇ 15ರಂದು ವಧುವನ್ನು ಪತ್ತೆಹಚ್ಚಿದ್ದಾರೆ. ನಂತರ ಮಗಳ ಮನಸ್ಸು ಒಲಿಸುವಲ್ಲಿ ಆಕೆಯ ಪೋಷಕರು ಯಶಸ್ವಿಯಾದರು. ಮಂಟಪದಲ್ಲೇ ಕಾದು ಕುಳಿತಿದ್ದ ವರನೊಂದಿಗೆ ಎಲ್ಲ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿಸಲಾಯಿತು.
ವಧು ಹಿಂತಿರುಗಿ ಬಂದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ವಿವಾಹದ ನಂತರ ವಧು-ವರ ಸಂತಸವಾಗಿದ್ದಾರೆ ಎಂದು ಹೇಳಲಾಗಿದೆ. ಮಂಟಪದಲ್ಲಿದ್ದ ವಧು ಇಷ್ಟು ದಿನಗಳ ಕಾಲ ಎಲ್ಲಿ ಹೋಗಿದ್ದಳು ಎಂದು ಚರ್ಚೆ ಆರಂಭವಾಗಿತ್ತು.
ಬಳಿಕ ವಧು ಮತ್ತು ವರನ ಮನೆಯವರು ಮಾತುಕತೆ ನಡೆಸಿ ವಿವಾಹಕ್ಕೆ ಅನುಮತಿ ನೀಡಿದರು. ಬಳಿಕ ವಿವಾಹ ನೆರವೇರಿದೆ.