ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ

Date:

Advertisements

ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಪ್ರಕಾರ ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜೆ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರಜಾ ದಿನಗಳು ವ್ಯತ್ಯಾಸ ಆಗಬಹುದು. ಕರ್ನಾಟಕದಲ್ಲಿ 8 ದಿನ ಬ್ಯಾಂಕ್ ರಜೆ ಇರಲಿದೆ.

ಈ ರಜೆಗಳು ಜೂನ್ ತಿಂಗಳಲ್ಲಿ ಬರುವ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರವನ್ನು ಸಹ ಒಳಗೊಂಡಿರುತ್ತದೆ. ಈ ರಜಾದಿನಗಳ ಪಟ್ಟಿಯಲ್ಲಿರುವ ಕೆಲವು ರಜಾದಿನಗಳು ಮಾತ್ರವೇ ದೇಶದ ಎಲ್ಲ ರಾಜ್ಯಗಳಿಗೆ ಅನ್ವಯಿಸುತ್ತವೆ. ಕೆಲವು ರಜಾದಿನಗಳು ಕೆಲವೇ ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತವೆ.

ಬ್ಯಾಂಕ್‌ಗಳು ಡಿಜಿಟಲ್ ಆಗಿರುವುದರಿಂದ ಬಹುತೇಕ ವಹಿವಾಟುಗಳನ್ನು ಆನ್‌ಲೈನ್‌ನಲ್ಲೇ ಮಾಡಿಕೊಳ್ಳಬಹುದು. ಆದರೆ, ಕೆಲವೊಂದು ವ್ಯವಹಾರಗಳಿಗಾಗಿ ಖುದ್ದು ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕಾಗುತ್ತದೆ.

Advertisements

ಜೂನ್ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜೆ ಇದೆ. ಈ 13 ದಿನದಲ್ಲಿ ಬರೋಬ್ಬರಿ ಏಳು ದಿನಗಳು ಶನಿವಾರ ಮತ್ತು ಭಾನುವಾರದ ರಜೆಗಳೇ ಆಗಿವೆ. ಒಡಿಶಾ ರಾಜ್ಯದಲ್ಲಿ ಜೂನ್ 14ರಿಂದ 17ರವರೆಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ ಇದೆ. ಪಂಜಾಬ್​ನಲ್ಲಿ ಜೂನ್ 8ರಿಂದ 10ರವರೆಗೆ ಮೂರು ದಿನಗಳು ರಜೆ ಇರಲಿದೆ. ಕರ್ನಾಟದಲ್ಲಿ ಜೂನ್ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರ ರಜೆ ಬಿಟ್ಟರೆ ಜೂನ್ 17ಕ್ಕೆ ಬಕ್ರೀದ್ ಹಬ್ಬಕ್ಕೆ ಮಾತ್ರ ಬ್ಯಾಂಕ್ ರಜೆ ಇರಲಿದೆ. ಜೂನ್‌ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್‌ ಕೆಜಿಗೆ ₹220

ಜೂನ್‌ನಲ್ಲಿ ಬ್ಯಾಂಕ್ ರಜಾದಿನಗಳು

  • ಜೂನ್ 10, ಸೋಮವಾರ: ಗುರು ಅರ್ಜುನ್ ದೇವ್ ಬಲಿದಾನ ದಿನ (ಪಂಜಾಬ್​ನಲ್ಲಿ ರಜೆ)
  • ಜೂನ್ 14, ಶುಕ್ರವಾರ: ಪಹಿಲಿ ರಾಜ ದಿನ (ಒಡಿಶಾದಲ್ಲಿ ರಜೆ)
  • ಜೂನ್ 15, ಶನಿವಾರ: ವೈಎಂಎ ದಿನ ಮತ್ತು ರಾಜ ಸಂಕ್ರಾಂತಿ ಹಬ್ಬ (ಮಿಜೋರಾಂ, ಒಡಿಶಾದಲ್ಲಿ ರಜೆ)
  • ಜೂನ್ 17, ಸೋಮವಾರ: ಬಕ್ರೀದ್ ಹಬ್ಬ (ಮಿಜೋರಾಂ, ಸಿಕ್ಕಿಂ, ಅರುಣಾಚಲ ಹೊರತುಪಡಿಸಿ ಉಳಿದೆಡೆ ರಜೆ)
  • ಜೂನ್ 18, ಮಂಗಳವಾರ: ಬಕ್ರೀದ್ ಹಬ್ಬ (ಜಮ್ಮು ಕಾಶ್ಮೀರದಲ್ಲಿ ರಜೆ)
  • ಜೂನ್ 21: ವಟ ಸಾವಿತ್ರ ವ್ರತ (ಹಲವು ರಾಜ್ಯಗಳಲ್ಲಿ ರಜೆ)

ಈ ಮೇಲಿನ ದಿನಗಳನ್ನು ಹೊರತುಪಡಿಸಿದರೆ ಜೂನ್‌ನಲ್ಲಿ ಬರುವ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರ ಭಾರತದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ರಜೆ ಇರುತ್ತವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X