ಬಾಲಿವುಡ್ ನಟ ಶಾರುಖ್ ಖಾನ್ ಪ್ರಸ್ತುತ ‘ಕಿಂಗ್’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಶೂಟಿಂಗ್ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಶಾರುಖ್ ಖಾನ್ ಸಾಹಸ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಸ್ನಾಯುಗಳಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ಶಾರುಖ್ ಖಾನ್ ಗಾಯಗೊಂಡ ಬಗ್ಗೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ. ಶಾರುಕ್ ಅವರು ಚೇತರಿಸಿಕೊಳ್ಳುವವರೆಗೂ ಒಂದು ತಿಂಗಳ ಕಾಲ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
‘ಕಿಂಗ್’ ಚಿತ್ರ 2026 ರಲ್ಲಿ ಬಿಡುಗಡೆಯಾಗಲಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಕಿಂಗ್ ಚಿತ್ರದಲ್ಲಿ ಶಾರುಕ್ ಮತ್ತು ಅವರ ಮಗಳು ಸುಹಾನಾ ಖಾನ್ ನಟಿಸುತ್ತಿದ್ದಾರೆ. ಚಿತ್ರವು ದೊಡ್ಡ ತಾರಾಬಳಗವನ್ನು ಹೊಂದಿದ್ದು, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅನಿಲ್ ಕಪೂರ್ ಸೇರಿದಂತೆ ಹಲವು ನಟ-ನಟಿಯರು ಅಭಿನಯಿಸಿದ್ದಾರೆ. ಇದಕ್ಕೂ ಮೊದಲು ಶಾರುಖ್ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.