ಸುಮಾರು 110 ದಿನಗಳಲ್ಲಿ 15 ಲಕ್ಷ ಕಿ.ಮೀ ಪ್ರಯಾಣದ ನಂತರ ಆದಿತ್ಯ ಎಲ್1 ಉಪಗ್ರಹ ಯಶಸ್ವಿಯಾಗಿ ಬಾಹ್ಯಾಕಾಶದ ನಿಗದಿತ ಕಕ್ಷೆಯನ್ನು ತಲುಪಿದೆ.
ತನ್ನ ಗಮ್ಯಸ್ಥಾನ ತಲುಪಿರುವ ಆದಿತ್ಯ ಎಲ್1 ಉಪಗ್ರಹ ಮುಂದಿನ ಐದು ವರ್ಷಗಳಲ್ಲಿ ಸೂರ್ಯನ ಬಗ್ಗೆ ಅನ್ವೇಷಣೆ ಕೈಗೊಂಡು ಇಸ್ರೋಗೆ ಮಾಹಿತಿ ರವಾನಿಸಲಿದೆ.
ಭಾರತವು ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ, ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ಸಾಧನೆಗೆ ಶುಭಾಶಯ ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೆ.2 ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್ 1 ಉಪಗ್ರಹವನ್ನು ಉಡಾವಣೆ ಮಾಡಿತ್ತು. ಆದಿತ್ಯ ಎಲ್1 ತನ್ನ ನಿಗದಿತ ಸ್ಥಳದಿಂದ ಗ್ರಹಣ ಮತ್ತಿತ್ತರ ಯಾವುದೇ ಸೌರಚಟುವಟಿಕೆಗಳನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಆದಿತ್ಯ ಎಲ್ 1 ತಲುಪಿರುವ ವ್ಯಾಪ್ತಿಯು ಭೂಮಿ ಹಾಗೂ ಸೂರ್ಯನ ನಡುವೆ ಇರುವ ಅಂತರದ ಶೇ.1 ರಷ್ಟು ಮಾತ್ರ ಎಂದು ಇಸ್ರೋ ತಿಳಿಸಿದೆ.