ಚಂಡೀಗಢದಿಂದ ಲಕ್ನೋಗೆ ಹಾರಲಿದ್ದ ಇಂಡಿಗೋ ವಿಮಾನ 6E 146ರಲ್ಲಿ ಪೈಲಟ್‌ಗೆ ತಾಂತ್ರಿಕ ದೋಷ ಕಂಡುಬಂದ ಕಾರಣ ವಿಮಾನವನ್ನು ರದ್ದುಗೊಳಿಸಲಾಗಿದೆ. ವಿಮಾನ ಹಾರಾಟಕ್ಕೂ ಮುನ್ನ ತಪಾಸಣೆ ಮಾಡುವಾಗ ಪೈಲಟ್‌ಗೆ ತಾಂತ್ರಿಕ ದೋಷ ಕಂಡುಬಂದಿದೆ.
ವಿಮಾನ ಟೇಕ್ ಆಫ್ ಆಗಲು ಸಿದ್ಧತೆ ನಡೆಸುತ್ತಿದ್ದಾಗ ತಾಂತ್ರಿಕ ದೋಷ ಕಂಡುಬಂದಿದೆ. ಬಳಿಕ ಎಲ್ಲಾ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಅಥವಾ ಪೂರ್ಣ ಮರುಪಾವತಿಯನ್ನು ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ಕಾಡುವ ಹಲವು ಪ್ರಶ್ನೆಗಳು, ತಜ್ಞರೇನು ಹೇಳುತ್ತಾರೆ?
ಸಮಸ್ಯೆ ಪತ್ತೆಯಾದ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಬೇರೆ ವ್ಯವಸ್ಥೆ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಖಚಿತಪಡಿಸಿದೆ.
ಸದ್ಯ ತಾಂತ್ರಿಕ ದೋಷವನ್ನು ವಿಮಾನಯಾನ ಸಂಸ್ಥೆಯ ನಿರ್ವಹಣಾ ತಂಡವು ತನಿಖೆ ಮಾಡುತ್ತಿದೆ. ಘಟನೆ ವೇಳೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದೂ ಸಂಸ್ಥೆ ಹೇಳಿದೆ.
ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 260ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ ಓರ್ವ ವ್ಯಕ್ತಿ ಬಿಟ್ಟು 241 ಮಂದಿ ಸಾವನ್ನಪ್ಪಿದರೆ, ವಿಮಾನ ಅಪ್ಪಳಿಸಿದ ಹಾಸ್ಟೆಲ್‌ನಲ್ಲಿಯೂ ಹಲವು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಬಳಿಕ ವಿಮಾನ ರದ್ದು ಪ್ರಕರಣಗಳು ಹೆಚ್ಚು ಮುನ್ನೆಲೆಗೆ ಬರುತ್ತಿದೆ.
