ದೇವಾಲಯದ ಬಾಗಿಲು ತೆರೆಯದ ಕಾರಣ ಮಧ್ಯಪ್ರದೇಶದ ಬಿಜೆಪಿ ಶಾಸಕರ ಪುತ್ರನ ಆಪ್ತ ಸಹಾಯಕರು ಅರ್ಚಕರಿಗೆ ಥಳಿಸಿದ್ದಾರೆ. ದೇವಾಸ್‌ನ ಪ್ರಸಿದ್ಧ ಚಾಮುಂಡಾ ದೇವಿ ದೇವಾಲಯದ ಅರ್ಚಕರೊಬ್ಬರನ್ನು ಮಧ್ಯಪ್ರದೇಶದ ಇಂದೋರ್‌ನ ಬಿಜೆಪಿ ಶಾಸಕರ ಪುತ್ರನ ಆಪ್ತ ಸಹಚರರು ಥಳಿಸಿದ್ದು ತೀವ್ರ ವಿಚಾರಣೆ ನಡೆದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಪುತ್ರ ರುದ್ರಾಕ್ಷ ಶುಕ್ಲಾ ಕಳೆದ ವಾರ ಬೆಳಗಿನ ಜಾವ 12.45ರ ಸುಮಾರಿಗೆ ಬೆಂಗಾವಲು ಪಡೆಯೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ದೇವಾಲಯದ ದ್ವಾರಗಳಲ್ಲಿ ಬೀಗ ಹಾಕಲಾಗಿತ್ತು. ತಡರಾತ್ರಿ ಸುಮಾರು 10 ರಿಂದ 12 ವಾಹನಗಳು ದೇವಾಲಯದ ಆವರಣಕ್ಕೆ ಬಂದಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ: ಆದಿವಾಸಿ ಯುವಕನ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನಿಂದ ಮೂತ್ರ ವಿಸರ್ಜನೆ
ರುದ್ರಾಕ್ಷನ ಸಹಚರರಲ್ಲಿ ಒಬ್ಬರಾದ ದೇವಾಸ್ ನಿವಾಸಿ ಜಿತೇಂದ್ರ ರಘುವಂಶಿ, ದೇವಾಲಯದ ದ್ವಾರಗಳನ್ನು ತೆರೆಯಬೇಕೆಂದು ಅರ್ಚಕರ ಬಳಿ ಒತ್ತಾಯಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ. ರಾತ್ರಿಯಲ್ಲಿ ಪ್ರವೇಶವನ್ನು ನಿಷೇಧಿಸುವ ದೇವಾಲಯದ ನಿಯಮಗಳನ್ನು ಅರ್ಚಕರಾದ ಉಪದೇಶ ನಾಥ್ ಉಲ್ಲೇಖಿಸಿದ್ದಾರೆ.
ಅರ್ಚಕರು ಬಾಗಿಲು ತೆಗೆಯಲು ನಿರಾಕರಿಸುತ್ತಿದ್ದಂತೆ ಜಿತೇಂದ್ರ ಅರ್ಚಕರನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಜಿತೇಂದ್ರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ನಿಂದನೆ ಮತ್ತು ದೈಹಿಕ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.
Madhya Pradesh: There is an allegation that BJP MLA Golu Shukla's son Rudraksh Shukla along with his supporters in a convoy of cars with red beacons reached the Chamunda Tekri temple and forcibly got the Shankh Dwar opened at 12:40 AM. The priest claims his son was assaulted… pic.twitter.com/LCfXhrEeNr
— Mohammed Zubair (@zoo_bear) April 13, 2025
ಎಫ್‌ಐಆರ್‌ನಲ್ಲಿ ಜಿತೇಂದ್ರ ಹೆಸರು ಮಾತ್ರವಿದೆ. ರುದ್ರಾಕ್ಷ ಶುಕ್ಲಾ ಅವರ ಯಾವುದೇ ಉಲ್ಲೇಖವಿಲ್ಲ. ಅಷ್ಟು ಮಾತ್ರವಲ್ಲದೆ ದೂರು ನೀಡಿದ ಕೆಲವೇ ಸಮಯದಲ್ಲಿ ದೂರು ಹಿಂಪಡೆಯುವಂತೆ ಒತ್ತಾಯಿಸಿ ಕರೆ ಬಂದಿದೆ. ಆದರೆ “ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಅರ್ಚಕರು ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ ಆರೋಪಿಗೆ ಕ್ರಿಮಿನಲ್ ಹಿನ್ನೆಲೆಯಿದೆ ಎನ್ನಲಾಗಿದೆ.
ಶಾಸಕರ ಮಗನೂ ಈ ಹಲ್ಲೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಾವು ದೇವಾಲಯದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸುತ್ತಿದ್ದೇವೆ. ಎಲ್ಲಾ ಪುರಾವೆಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
