ಸಿಬ್ಬಂದಿಗಳು ಯಾವುದೇ ಸೂಚನೆಯಿಲ್ಲದೆ ಸಾಮೂಹಿಕವಾಗಿ ಸಿಕ್ ಲೀವ್ (Mass Sick Leave)ತೆಗೆದುಕೊಂಡು ವಿಮಾನಗಳನ್ನೇ ರದ್ದು ಮಾಡಬೇಕಾದ ಸ್ಥಿತಿ ಉಂಟಾದ ಕಾರಣ ಏರ್ ಇಂಡಿಯಾ ಎಕ್ಸ್‌ಪ್ರೆಸ್ 25 ಸಿಬ್ಬಂದಿಗಳನ್ನು ವಜಾಗೊಳಿಸಿದೆ.
200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಅನಾರೋಗ್ಯ ಕಾರಣ ನೀಡಿ ರಜೆ ಹಾಕಿದ್ದಾರೆ ಎಂದು ವರದಿಯಾಗಿದೆ. ಅಷ್ಟೊಂದು ಪ್ರಮಾಣದಲ್ಲಿ ಸಿಬ್ಬಂದಿಗಳ ಕೊರತೆ ಉಂಟಾದ ಕಾರಣದಿಂದಾಗಿ ಕೊಚ್ಚಿ, ಕ್ಯಾಲಿಕಟ್ ಮತ್ತು ಬೆಂಗಳೂರು ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟಕ್ಕೆ ಅಡಚಣೆಯಾಗಿದೆ. ಸುಮಾರು 70 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಇನ್ನೂ ಹಲವಾರು ವಿಮಾನಗಳ ವಿಳಂಬವಾಗಿದೆ.
#WATCH | Over 70 international & domestic flights of Air India Express cancelled after its senior crew member went on mass ‘sick leave’.
DPAP chief Ghulam Nabi Azad, whose Delhi-Srinagar was also cancelled, says, “…I was supposed to leave in the morning. But I am now leaving… pic.twitter.com/SWC9JnIX1d
— ANI (@ANI) May 8, 2024
ಇನ್ನು ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯು ಉಳಿದ ಕ್ಯಾಬಿನ್ ಸಿಬ್ಬಂದಿಗೆ ಗುರುವಾರ ಸಂಜೆ 4 ಗಂಟೆಯೊಳಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಅಥವಾ ವಜಾಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಸಾಮೂಹಿಕ ‘ಸಿಕ್ ಲೀವ್’ ಹಾಕಿಕೊಂಡ ಸಿಬ್ಬಂದಿಗಳು; 78 ವಿಮಾನಗಳು ರದ್ದು!
ಏರ್‌ಲೈನ್‌ನಲ್ಲಿ ಉನ್ನತ ಮಟ್ಟದಲ್ಲಿ ಸುಮಾರು 500 ಸಿಬ್ಬಂದಿಗಳು ಸೇರಿದಂತೆ ಸುಮಾರು 1,400 ಕ್ಯಾಬಿನ್ ಸಿಬ್ಬಂದಿ ಇದ್ದಾರೆ. ಏರ್‌ಲೈನ್‌ನಲ್ಲಿ ವೇತನ ಸೇರಿದಂತೆ, ಕೆಲವು ವ್ಯವಸ್ಥೆಗಳ ವಿರುದ್ಧ ಪ್ರತಿಭಟನೆಯ ಭಾಗವಾಗಿ ಮಂಗಳವಾರ ರಾತ್ರಿಯಿಂದ 200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿಲ್ಲ. ಅನಾರೋಗ್ಯದ ಕಾರಣ ನೀಡಿದ್ದಾರೆ.
#WATCH | Kerala: Passengers at Thiruvananthapuram airport face difficulties as more than 70 international and domestic flights of Air India Express have been cancelled after senior crew member of the airline went on mass ‘sick leave’. pic.twitter.com/c234yIzedA
— ANI (@ANI) May 8, 2024
ಟಾಟಾ ಗ್ರೂಪ್‌ನೊಂದಿಗೆ ವಿಲೀನಗೊಂಡ ನಂತರ ಸಿಬ್ಬಂದಿಗಳನ್ನು ಸಮಾನವಾಗಿ ನೋಡಲಾಗುತ್ತಿಲ್ಲ. ಇಂಟರ್‌ವೀವ್‌ನಲ್ಲಿ ಪಾಸ್ ಆಗಿದ್ದರೂ ಕೂಡಾ ಕೆಲವು ಸಿಬ್ಬಂದಿಗೆ ಕಡಿಮೆ ದರ್ಜೆಯ ಉದ್ಯೋಗ ನೀಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸಿಬ್ಬಂದಿಗಳ ಆರೋಪವಾಗಿದೆ.
ಇನ್ನು ಪ್ರಾದೇಶಿಕ ಕಾರ್ಮಿಕ ಆಯುಕ್ತರು ಏರ್‌ಲೈನ್‌ಗೆ ಪತ್ರ ಬರೆದಿದ್ದು ಕಳವಳ ವ್ಯಕ್ತಪಡಿಸಿದೆ. “ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಆಡಳಿತವು ಯಾವುದೇ ಜವಾಬ್ದಾರಿಯುತ ನಿರ್ಧಾರ ಮಾಡಿ ಯಾವುದೇ ರಾಜಿ ಪ್ರಕ್ರಿಯೆ ನಡೆಸಿಲ್ಲ. ಕಾರ್ಮಿಕ ಕಾನೂನುಗಳ ದುರುಪಯೋಗ ಮತ್ತು ಸ್ಪಷ್ಟ ಉಲ್ಲಂಘನೆ ಇಲ್ಲಿ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.