ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಗೆ ನೀಡಿದ ಆಹಾರದಲ್ಲಿ ಲೋಹದ ಬ್ಲೇಡ್ ಪತ್ತೆಯಾಗಿದೆ.
ಜೂನ್ 9 ರಂದು ಪತ್ರಕರ್ತ ಮ್ಯಾಥ್ಯೋಸ್ ಪೌಲ್ ಅವರು ಏರ್ ಇಂಡಿಯಾ ವಿಮಾನ 175ರಲ್ಲಿ ಬೆಂಗಳೂರಿನಿಂದ ಅಮೆರಿಕಾದ ಸ್ಯಾನ್ ಪ್ರಾನ್ಸಿಸ್ಕೋಗೆ ಪ್ರಯಾಣಿಸುತ್ತಿದ್ದಾಗ ಅವರಿಗೆ ನೀಡಿದ ಊಟದಲ್ಲಿ ಲೋಹದ ಬ್ಲೇಡ್ ಪತ್ತೆಯಾಗಿದೆ.
ಪೌಲ್ ಅವರು ತಮಗಾದ ಆಘಾತಕಾರಿ ಅನುಭವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ನನಗೆ ನೀಡದ ಆಹಾರವನ್ನು ಸೇವಿಸಿ ಆಗಿಯುವ ಎರಡು ಅಥವಾ ಮೂರು ಸೆಕೆಂಡ್ ಸಂದರ್ಭದಲ್ಲಿ ಏನೋ ಇದೆ ಎಂಬುದನ್ನು ಅರಿತುಕೊಂಡೆ. ತಕ್ಷಣದಲ್ಲಿ ನಾನದನ್ನು ಉಗಿದಾಗ ಅದು ಲೋಹದ ವಸ್ತುವಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಲಿಲ್ಲ. ಖಂಡಿತವಾಗಿ ಇದರ ತಪ್ಪಿನ ಹೊಣೆ ಏರ್ ಇಂಡಿಯಾ ಕ್ಯಾಟರಿಂಗ್ ಸೇವೆಯವರದ್ದಾದರೂ ಆದರೆ ಈ ಘಟನೆಯು ನಾನು ಏರ್ ಇಂಡಿಯಾ ಮೇಲೆ ಹೊಂದಿರುವ ಘನತೆಗೆ ಕಳಂಕ ತಂದಿದೆ. ಒಂದು ವೇಳೆ ಈ ಮೆಟಲ್ ವಸ್ತುವನ್ನು ಮಗು ಸೇವಿಸಿದ್ದರೆ ಏನಾಗುತ್ತಿತ್ತು” ಎಂದು ಪೌಲ್ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ
“ಮೊದಲ ಚಿತ್ರವು ನಾನು ಆಹಾರ ಸೇವಿಸುವಾಗ ಉಗಿದ ಮೆಟಲ್ ಚಿತ್ರದ್ದಾಗಿದ್ದರೆ ಎರಡನೇ ಚಿತ್ರ ನನ್ನ ಆಹಾರ ಸೇವಿಸುವುದಕ್ಕಿಂತ ಮುಂಚಿನ ಇರುವ ಆಹಾರದ್ದಾಗಿದೆ. ಯಾವುದೇ ವಿಮಾನದಲ್ಲಿ ಬ್ಲೇಡ್ ಪತ್ತೆಯಾಗುವುದು ಅಪಾಯಕಾರಿಯಾಗಿದೆ. ಇದು ನನ್ನ ನಾಲಿಗೆಯನ್ನು ಕತ್ತರಿಸುತ್ತಿತ್ತು” ಎಂದು ಏರ್ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ.
ಈ ಆರೋಪ ಮಾಡಿದ ಕೆಲವು ದಿನಗಳ ನಂತರ ಪೌಲ್ ಅವರಿಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಘಟನೆಯ ಪರಿಹಾರವಾಗಿ ವಿಶ್ವದ ಯಾವುದೇ ಪ್ರದೇಶಗಳಿಗೆ ಉಚಿತ ಬ್ಯಸಿನೆಸ್ ಕ್ಲಾಸ್ ಪ್ರಯಾಣ ನೀಡುವುದಾಗಿ ಹೇಳಿದೆ. ಇದನ್ನು ಲಂಚ ಎಂದು ಕರೆದಿರುವ ಪೌಲ್ ಅವರು ನಿರಾಕರಿಸಿದ್ದಾರೆ.
ಏರ್ ಇಂಡಿಯಾ ಟಾಟಾ ಗ್ರೂಪ್ ಒಡೆತನದ ಸಂಸ್ಥೆಯಾಗಿದ್ದು, ಘಟನೆಯ ನಂತರ ಸಂಸ್ಥೆಯ ಗ್ರಾಹಕ ಸೇವಾ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ರಾಜೇಶ್ ದೋಗ್ರಾ ಅವರು ಊಟದಲ್ಲಿ ವಿದೇಶಿ ವಸ್ತು ಇದ್ದಿದ್ದನ್ನು ದೃಢೀಕರಿಸಿದ್ದಾರೆ.
“ ನಮ್ಮ ಕ್ಯಾಟರಿಂಗ್ ಪಾಲುದಾರರು ನೀಡಿರುವ ಆಹಾರದಲ್ಲಿ ತರಕಾರಿ ಸಂಸ್ಕರಿಸುವ ಯಂತ್ರ ಪತ್ತೆಯಾಗಿರುವುದನ್ನು ನಾವು ತನಿಖೆಗೆ ಒಳಪಡಿಸುತ್ತೇವೆ. ನಾವು ನಮ್ಮ ಪಾಲುದಾರರೊಂದಿಗೆ ಸಂಸ್ಕರಣೆಯನ್ನು ಪರಿಶೀಲಿಸುವುದು, ವಿಶೇಷವಾಗಿ ಘನ ತರಕಾರಿಗಳನ್ನು ಕತ್ತರಿಸಿದ ನಂತರ ಸುರಕ್ಷತಾ ಕ್ರಮಗಳನ್ನು ಬಲಪಡಿಸುವುದಕ್ಕೆ ಮತ್ತಷ್ಟು ಆದ್ಯತೆ ನೀಡುತ್ತೇವೆ” ಎಂದು ರಾಜೇಶ್ ದೋಗ್ರಾ ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಅಸ್ವಚ್ಛತೆ ಕ್ಯಾಬಿನ್‌ಗಳು, ಕಾರ್ಯ ನಿರ್ವಹಿಸದ ಯಂತ್ರಗಳು ಹಾಗೂ ಕಳಪೆ ಗುಣಮಟ್ಟದ ಆಹಾರಗಳು ಪತ್ತೆಯಾಗಿರುವ ಬಗ್ಗೆ ದೂರುಗಳು ವರದಿಯಾಗಿವೆ.
Air India food can cut like a knife. Hiding in its roasted sweet potato and fig chaat was a metal piece that looked like a blade. I got a feel of it only after chewing the grub for a few seconds. Thankfully, no harm was done. Of course, the blame squarely lies with Air India’s… pic.twitter.com/NNBN3ux28S
— Mathures Paul (@MathuresP) June 10, 2024
