ಸುಮಾರು 273.50 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ದಂಡವನ್ನು ಪ್ರಶ್ನಿಸಿ ಪತಂಜಲಿ ಆಯುರ್ವೇದ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಶೇಖರ್ ಬಿ ಸರಾಫ್ ಮತ್ತು ನ್ಯಾಯಮೂರ್ತಿ ವಿಪಿನ್ ಚಂದ್ರ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ರೀತಿಯ ದಂಡಗಳನ್ನು ಕ್ರಿಮಿನಲ್ ವಿಚಾರಣೆಯೆ ನಂತರವೇ ವಿಧಿಸಬಹುದು ಎಂಬ ಪತಂಜಲಿಯ ವಾದವನ್ನು ತಿರಸ್ಕರಿಸಿತು.
ಇದನ್ನು ಓದಿದ್ದೀರಾ? ಸುಳ್ಳು ಜಾಹೀರಾತು | ಪತಂಜಲಿ ರಾಮದೇವ್ ವಿರುದ್ಧ ಬಂಧನ ವಾರೆಂಟ್ ಜಾರಿ
ಹಾಗೆಯೇ ತೆರಿಗೆ ಅಧಿಕಾರಿಗಳು ಕ್ರಿಮಿನಲ್ ನ್ಯಾಯಾಲಯದ ವಿಚಾರಣೆಗಳ ಅಗತ್ಯವಿಲ್ಲದೆ ಸಿವಿಲ್ ವಿಚಾರಣೆಯ ಮೂಲಕ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ದಂಡ ವಿಧಿಸಬಹುದು ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಜಿಎಸ್‌ಟಿ ದಂಡದ ಬಗ್ಗೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತೀರ್ಪು ನೀಡಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. “ವಿವರವಾದ ವಿಶ್ಲೇಷಣೆಯ ನಂತರ, ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ನಡೆಯುವ ಪ್ರಕ್ರಿಯೆಯನ್ನು ತೀರ್ಪು ನೀಡುವ ಅಧಿಕಾರಿಯೇ ತೀರ್ಮಾನಿಸಬೇಕು. ವಿಚಾರಣೆಗೆ ಒಳಗಾಗುವ ಅಗತ್ಯವಿಲ್ಲ ಎಂಬುದು ಸ್ಪಷ್ಟ” ಎಂದು ಪೀಠ ಹೇಳಿದೆ.
