2020ರಲ್ಲಿ ಕೇರಳದ ಪಾಲಕ್ಕಾಡ್ ಸಮೀಪದ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಸಾಗಿಸುತ್ತಿದ್ದಾಗ 19 ವರ್ಷದ ಕೋವಿಡ್ -19 ರೋಗಿಯ ಮೇಲೆ ಅತ್ಯಾಚಾರ ಎಸಗಿದ ಆಂಬ್ಯುಲೆನ್ಸ್ ಚಾಲಕನಿಗೆ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಧಾನ ಸೆಷನ್ಸ್ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಗುರುವಾರ ಕಾಯಂಕುಲಂ ಮೂಲದ 29 ವರ್ಷದ ನೌಫಲ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಾಗೆಯೇ ಅಪರಾಧಿಗೆ ನ್ಯಾಯಾಲಯವು 2,12,000 ರೂ. ದಂಡವನ್ನೂ ವಿಧಿಸಿದೆ.
ಇದನ್ನು ಓದಿದ್ದೀರಾ? ಹಿರೇಮಠ ಸಂದರ್ಶನ-2 | ಸರ್ಕಾರಕ್ಕೆ ಹಣ ಬರಬೇಕಂದ್ರೆ ಗಣಿಗಾರಿಕೆ ರಾಷ್ಟ್ರೀಕರಣ ಮಾಡ್ಬೇಕು
2020ರ ಸೆಪ್ಟೆಂಬರ್ 5ರ ಮಧ್ಯರಾತ್ರಿ ಆಂಬ್ಯುಲೆನ್ಸ್ ಚಾಲಕ ರೋಗಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಡೂರ್ ಜನರಲ್ ಆಸ್ಪತ್ರೆಯಿಂದ ಪಂದಳಂನ ಕೋವಿಡ್ ಕೇಂದ್ರಕ್ಕೆ ಸಂತ್ರಸ್ತೆಯನ್ನು ಕರೆದೊಯ್ಯಲಾಗುತ್ತಿತ್ತು. ಅರನ್ಮುಲಾದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾನೆ.
ಇನ್ನು ತೀರ್ಪನ್ನು ಸ್ವಾಗತಿಸಿದ ತನಿಖಾ ಅಧಿಕಾರಿಗಳು, “ಆ ಸಮಯದಲ್ಲಿ ರಾಜ್ಯದಲ್ಲಿ ವೈರಸ್‌ನ ಆತಂಕಕಾರಿ ಹರಡುವಿಕೆಯಿಂದಾಗಿ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಆದರೆ ಪೊಲೀಸರು ಅಗತ್ಯವಿರುವ ಎಲ್ಲಾ ಪುರಾವೆಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧಿ ಸರಿಯಾದ ಶಿಕ್ಷೆ ಘೋಷಿಸಲಾಗಿದೆ” ಎಂದು ಹೇಳಿದ್ದಾರೆ.
ಚಿಕಿತ್ಸಾ ಕೇಂದ್ರಕ್ಕೆ ಬಂದ ಬಳಿಕ ಸಂತ್ರಸ್ತೆ ತನಗೆ ಅತ್ಯಾಚಾರವಾಗಿರುವುದನ್ನು ವೈದ್ಯರಿಗೆ ತಿಳಿಸಿದ್ದಾಳೆ. ಆಕೆಯ ಹೇಳಿಕೆಯ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ನೌಫಲ್‌ನ ಬಂಧನ ಮಾಡಲಾಗಿದೆ.
