ರಾಷ್ಟ್ರೀಯ ಸ್ವಯಂ ಸೇವಾ ಸಂಘ ಯಾವಾಗಲು ಮೀಸಲಾತಿಯನ್ನು ಬೆಂಬಲಿಸಲಿದೆ ಹಾಗೂ ದೇಶದಲ್ಲಿ ಸಾಮಾಜಿಕ ಅಸಮಾನತೆಗಳಿರುವುದರಿಂದ ಮೀಸಲಾತಿ ಮುಂದುವರಿಯಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್‌ವತ್ ಹೇಳಿದ್ದಾರೆ.
ತೆಲಂಗಾಣದ ರಾಜಮಂಡ್ರಿಯ ನಡರುಗಲ್‌ನಲ್ಲಿ ವಿದ್ಯಾ ಭಾರತಿ ವಿಜ್ಞಾನ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಸಂಘವು ಮೀಸಲಾತಿಯನ್ನು ವೀರೋಧಿಸುತ್ತದೆ ಎಂಬ ವಿಡಿಯೋ ಹರಿದಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಕಂಡಿದ್ದೇನೆ. ಇಂತಹ ಹೇಳಿಕೆಗಳು ಯಾವುದು ಸತ್ಯಗಳಲ್ಲ ಎಂದು ಭಾಗವತ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಹಿಂದೆ ಮೀಸಲಾತಿಯನ್ನು ದುರ್ಬಲ ವರ್ಗಗಳಿಗಾಗಿ ಪರಿಚಯಿಸಲಾಗಿತ್ತು.ಆರ್‌ಎಸ್‌ಎಸ್ ಯಾವುದೇ ಷರತ್ತುಗಳಿಲ್ಲದೆ ಬೆಂಬಲಿಸುತ್ತದೆ. ಸಾಮಾಜದಲ್ಲಿ ಇಂದಿಗೂ ಕೆಲವು ಗುಂಪುಗಳಲ್ಲಿ ತಾರತಮ್ಯಗಳಿವೆ. ಅವರಿಗೆ ಮೀಸಲಾತಿ ಅಗತ್ಯವಾಗಿದೆ ಎಂದು ಹೇಳಿದರು.
ತೆಲಂಗಾಣ ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಅವಕಾಶ ವಂಚಿತರಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂಬ ಬಹಿರಂಗ ಬೆದರಿಕೆಯುಳ್ಳ ಪತ್ರ ಹರಿದಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ – ಬಿಜೆಪಿ ಜಟಾಪಟಿ ನಡೆಸುತ್ತಿರುವ ಸಂದರ್ಭದಲ್ಲಿಯೆ ಭಾಗವತ್ ಸ್ಪಷ್ಟೀಕರಣ ಬಂದಿದೆ.
