ಅಮೃತಸರ ದೇವಾಲಯದ ಮೇಲೆ ಗ್ರೆನೇಡ್ ದಾಳಿ ಮಾಡಿದ ಆರೋಪಿ ಎನ್‌ಕೌಂಟರ್‌ಗೆ ಬಲಿಯಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಸೋಮವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಆರೋಪಿಯನ್ನು ಅಮೃತಸರದ ಬಾಲ್ ಗ್ರಾಮದ ನಿವಾಸಿ ಜಗ್ಜಿತ್ ಸಿಂಗ್ ಅವರ ಪುತ್ರ ಗುರ್ಸಿದಕ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದು ಆತನ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ: ಪಂಜಾಬ್ ಸಿಎಂ; ವಿಪಕ್ಷ ಖಂಡನೆ
ಠಾಕೂರ್ ದ್ವಾರ ದೇವಾಲಯದ ಹೊರಭಾಗದಲ್ಲಿ ಮಾರ್ಚ್ 15ರಂದು ಗ್ರೆನೇಡ್ ದಾಳಿ ನಡೆದಿದದ್ದು, ದೇವಾಲಯದ ಗೋಡೆ ಕುಸಿದಿತ್ತು. ಅದಾದ ಬಳಿಕ ಆರೋಪಿಗಳನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದರು.
Acting on specific intelligence, Commissionerate Police Amritsar decisively tracked down those responsible for the attack on Thakur Dwara Mandir, #Amritsar, on March 15, 2025. An FIR has been registered at PS Chheharta under the Explosive Substances Act, and intelligence-based…
— DGP Punjab Police (@DGPPunjabPolice) March 17, 2025
“ಆರೋಪಿಗಳು ತಪ್ಪಿಸಲು ಯತ್ನಿಸಿದ್ದು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳಾದ ಗುರ್‌ಪ್ರೀತ್ ಸಿಂಗ್ ಅವರಿಗೆ ಗಾಯವಾಗಿದೆ. ಅಮೊಲಕ್ ಸಿಂಗ್ ಅವರ ಟರ್ಬನ್ ಮೇಲೆ ಗುಂಡು ಹಾರಿಸಲಾಗಿದೆ” ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥರಾದ ಗೌರವ್ ಯಾದವ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಸ್ವಯಂ ರಕ್ಷಣೆಗಾಗಿ ಪೊಲೀಸರು ಆರೋಪಿಗಳ ಮೇಲೆ ಪ್ರತಿದಾಳಿ ನಡೆಸಿದ್ದು, ಆರೋಪಿಗೆ ಗಾಯಗೊಂಡನು. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಆತನ ಶೋಧ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಯಾದವ್ ಮಾಹಿತಿ ನೀಡಿದ್ದಾರೆ.
