110 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮುಂಬೈನಿಂದ ಜೋಧ್‌ಪುರಕ್ಕೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ತಾಂತ್ರಿಕ ದೋಷದಿಂದಾಗಿ ರದ್ಧು ಮಾಡಲಾಗಿದೆ. ಈ ವಾರದಲ್ಲಿ ಮೂರನೇ ಘಟನೆ ಇದಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು 3.5 ಗಂಟೆಗಳ ಕಾಲ ಕಾದಿದ್ದಾರೆ ಎಂದು ಹೇಳಲಾಗಿದೆ.
ಈ ಮಾರ್ಗದ ಪ್ರಯಾಣದ ಸಮಯ ಕೇವಲ ಒಂದು ಗಂಟೆ 50 ನಿಮಿಷಗಳಾಗಿದೆ. ವಿಮಾನವನ್ನು ಮತ್ತೆ ಪಾರ್ಕಿಂಗ್ ಸ್ಥಳಕ್ಕೆ ತಂದು ಎಲ್ಲರನ್ನೂ ಕೆಳಗಿಸಲಾಗಿದೆ. ಭದ್ರತಾ ತಪಾಸಣೆಗಳನ್ನು ಪುನಃ ಮಾಡಿದ ನಂತರ ಮಧ್ಯಾಹ್ನ 12.36ಕ್ಕೆ ವಿಮಾನಯಾನ ಸಂಸ್ಥೆಯು ವ್ಯವಸ್ಥೆ ಮಾಡಿದ ಪರ್ಯಾಯ ವಿಮಾನವನ್ನು ಪ್ರಯಾಣಿಕರು ಹತ್ತಿದ್ದಾರೆ.
ಇದನ್ನು ಓದಿದ್ದೀರಾ? ಏರ್ ಇಂಡಿಯಾ ವಿಮಾನ ದುರಂತ; ಇಲ್ಲಿವರೆಗೆ ಏನೇನು?
ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಬೆಳಿಗ್ಗೆ 9.15ಕ್ಕೆ ಹೊರಡಬೇಕಿತ್ತು. ಆದರೆ ಆ ವಿಮಾನದ ಪ್ರಯಾಣಿಕರಿಗೆ ಮಧ್ಯಾಹ್ನ 12.36ಕ್ಕೆ ವಿಮಾನ ವ್ಯವಸ್ಥೆ ಮಾಡಲಾಗಿದೆ.
ಆಗಸ್ಟ್ 17ರಂದು, ಎರಡು ಏರ್ ಇಂಡಿಯಾ ವಿಮಾನಗಳು ರದ್ದಾಗಿದೆ. ದೆಹಲಿ-ಲೇಹ್ ಮತ್ತು ಮುಂಬೈ-ಅಹಮದಾಬಾದ್ ವಿಮಾನಗಳನ್ನು ರದ್ದು ಮಾಡಲಾಗಿದ್ದು, ಕ್ರಮವಾಗಿ ನಾಲ್ಕು ಮತ್ತು ಆರು ಗಂಟೆಗಳ ವಿಳಂಬದ ನಂತರ ಪ್ರಯಾಣಿಕರು ಬದಲಿ ವಿಮಾನದಲ್ಲಿ ಹಾರಾಟ ನಡೆಸಿದ್ದರು.
