ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಪಕ್ಷಕ್ಕೆ 400 ಸ್ಥಾನಗಳು ಬೇಕು ಎಂದು ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಇತ್ತೀಚೆಗೆ ನೀಡಿದ್ದ ಹೇಳಿಕೆಯು ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದವಾದ ಬೆನ್ನಲ್ಲೇ, ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು.
ಈ ನಡುವೆ ರಾಜಸ್ಥಾನದ ಬಿಜೆಪಿಯ ಮಹಿಳಾ ಅಭ್ಯರ್ಥಿಯೋರ್ವರು ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದು, “ದೇಶದ ಹಿತಕ್ಕಾಗಿ ಕಠಿಣವಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ” ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ರಾಜಸ್ಥಾನದ ನಾಗೌರ್‌ನ ಬಿಜೆಪಿ ಅಭ್ಯರ್ಥಿಯಾಗಿರುವ ಜ್ಯೋತಿ ಮಿರ್ಧಾ ಈ ಹೇಳಿಕೆ ನೀಡಿದ್ದು, ಭಾರೀ ವಿವಾದ ಉಂಟು ಮಾಡಿದೆ. ಮಾರ್ಚ್ 30ರಂದು ನಾಗೌರ್‌ನಲ್ಲಿ ಮಾಡಿದ ಭಾಷಣದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ತನ್ನ ಭಾಷಣವನ್ನು ಹಿಂದಿಯಲ್ಲಿ ಮಾಡಿರುವ ಜ್ಯೋತಿ ಮಿರ್ಧಾ, “ದೇಶ್ ಕೆ ಹಿತ್ ಮೇ ಕಯೀ ಕಠೋರ್ ನಿರ್ಧಾರ್ ಕರ್ನೇ ಪಡ್ತೇ ಹೈಂ. ಉನ್ಕೇ ಲಿಯೇ ಹಮೇಂ ಸಂವಿಧಾನಿಕ್ ಬದ್ಲಾವ್ ಕರ್ನೇ ಪಡ್ತೇ ಹೈಂ. ಅಗರ್ ಸಂವಿಧಾನ್ ಕೆ ಅಂದರ್ ಹಮೇಂ ಕೋಯಿ ಬದ್ಲಾವ್ ಕರ್ನಾ ಹೋತಾ ಹೈ ತೋ ಆಪ್ ಮೇ ಸೆ ಕಹೀಂ ಲೋಗ್ ಜಾಂತೇ ಹೈ ಕಿ ಉಸ್ಕೇ ಲಿಯೇ ದೋನೋ ಜೋ ಹುಮಾರೇ ಸದನ್ ಹೈ, ಲೋಕಸಭಾ ಔರ್ ರಾಜ್ಯಸಭಾಕೆ ಅಂದರ್ ಹಮೇ ಚಾಹಿಯೇ ಹೋತೀ ಹೈ” ಎಂದು ಹೇಳಿಕೆ ನೀಡಿದ್ದಾರೆ. ಅಂದರೆ, ”ದೇಶದಲ್ಲಿ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಅದಕ್ಕಾಗಿ ನಾವು ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಬೇಕಾಗಿದೆ. ನಾವು ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಬೇಕಾದರೆ, ನಮಗೆ ಸಂಸತ್ತಿನ ಎರಡೂ ಸದನಗಳು, ಲೋಕಸಭೆ ಮತ್ತು ರಾಜ್ಯಸಭೆಯ ಅಂಗೀಕಾರದ ಅಗತ್ಯವಿದೆ ಎಂದು ನಿಮ್ಮಲ್ಲಿ ಅನೇಕರಿಗೆ ತಿಳಿದಿರಬಹುದು” ಎಂದು ಹೇಳಿ, ಈ ಬಾರಿ 400 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
After Anant Hegde, Another BJP Lok Sabha candidate Jyoti Mirdha remarks on ‘amending Constitution’.
“Desh ke hit mein kai kathor nirnay karne padhte hain. Unke liye humein samvidhanik badlav karne padhte hain. Agar samvidhan ke andar humein koi badlav karna hota hai toh aap mein… https://t.co/C2GtvQegPj pic.twitter.com/YBuRf4r0Rh— Mohammed Zubair (@zoo_bear) April 2, 2024
ಜ್ಯೋತಿ ಮಿರ್ಧಾ ಅವರ ಈ ಹೇಳಿಕೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಇದು ರಾಜಸ್ಥಾನದ ನಾಗೌರ್‌ನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ. ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತ ಬೇಕು ಎಂದು ಜ್ಯೋತಿ ಮಿರ್ಧಾ ಹೇಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಪಡೆದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಸಂಸದ ಅನಂತ ಹೆಗಡೆ ಕೂಡ ಹೇಳಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂಬುದು ಈ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ರದ್ದುಪಡಿಸುವ ಮೂಲಕ ಬಿಜೆಪಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ” ಎಂದು ಆಕ್ರೋಶ ಹೊರಹಾಕಿದೆ.
“ಲೋಕಸಭೆಯಲ್ಲಿ, ಬಿಜೆಪಿ ಮತ್ತು ಎನ್‌ಡಿಎಗೆ ಭಾರೀ ಜನಾದೇಶವಿದೆ, ಆದರೆ ರಾಜ್ಯಸಭೆಯಲ್ಲಿ ನಮಗೆ ಇನ್ನೂ ಬಹುಮತವಿಲ್ಲ. ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಎಲ್ಲವೂ ಸಾಧ್ಯವಾಗಲಿದೆ” ಎಂದು ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಹಿಂದಿಯಲ್ಲಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸಂವಿಧಾನ ಬದಲಾವಣೆ ಮನುವ್ಯಾದಿ ಮನಸ್ಥಿತಿ,,, ತಮ್ಮ ಮನೋವಿಕೃತ ಚಾತುರ್ವರ್ಣ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಲು ಹೂಡಿರುವ ಸಂಚು,,, ದೇಶದ ಬಹುಸಂಖ್ಯಾತ ಶೂದ್ರರು ಜಾಗೃತ ಆಗದೆ ಇನ್ನೂ ಭಾಷಣಕ್ಕೆ ಸುಳ್ಳು ಭರವಸೆಗಳಿಗೆ ಮರುಳಾದರೆ ಮುಂದೊಂದು ದಿನ ಶತಮಾನಗಳ ಹಿಂದಿನ ದಿನಗಳು ಬಂದರೂ ಆಶ್ಚರ್ಯವಿಲ್ಲ