ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮತ್ತೊಂದು ಬೆಂಕಿ ದುರಂತ ಸಂಭವಿಸಿದೆ. ಕುಂಭಮೇಳದ ಸೆಕ್ಟರ್ 22 ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಹಲವಾರು ಪೆಂಡಾಲ್‌ಗಳು ಸುಟ್ಟು ಹೋಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇತ್ತೀಚೆಗೆ, ಜನವರಿ 19ರಂದು ಕೂಡ ಕುಂಭಮೇಳದ ಅಡುಗೆ ಮಾಡುವ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಬುಧವಾರ (ಜ.29) ಕಾಲ್ತುಳಿತ ಸಂಭವಿಸಿದ್ದು, ಸುಮಾರು 40 ಜನರು ಸಾವನ್ನಪ್ಪಿದ್ದಾರೆ. ಆ ದುರ್ಘಟನೆ ನಡೆದ ಒಂದು ದಿನದ ಬಳಿಕ, ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ.
ಪೆಂಡಾಲ್‌ಗಳಿಗೆ ಬೆಂಕಿ ಹೊತ್ತಿಕೊಂಡಾಗ ಜನರು ಟೆಂಟ್‌ಗಳ ಬಳಿ ಇರಲಿಲ್ಲ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಆದಾಗ್ಯೂ, ಸುಮಾರು 15ಕ್ಕೂ ಹೆಚ್ಚು ಪೆಂಡಾಲ್‌ಗಳು ಸುಟ್ಟುಹೋಗಿವೆ.
#WATCH | Prayagraj | UP Fire Department official Pramod Sharma says, "We got information about a fire in 15 tents under the Chatnag Ghat Police Station area, today. Taking immediate action, the fire was brought under control and doused. As per the SDM, it was an unauthorised tent… pic.twitter.com/a5cRkrCWKW
— ANI (@ANI) January 30, 2025
ಪ್ರಯಾಗ್‌ರಾಜ್ ನಗರದ ಚಟ್ನಾಗ್ ಘಾಟ್‌ನಲ್ಲಿದ್ದ 15 ಟೆಂಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಕ್ರಮ ಕೈಗೊಂಡು ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿಯಲ್ಲಿ ಸುಟ್ಟುಹೋಗಿರುವ ಟೆಂಟ್‌ಗಳು ಅನಧಿಕೃತವಾಗಿ ನಿರ್ಮಿಸಿದ್ದ ಟೆಂಟ್‌ಗಳು. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ” ಎಂದು ಉತ್ತರ ಪ್ರದೇಶ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಪ್ರಮೋದ್ ಶರ್ಮಾ ಹೇಳಿದ್ದಾರೆ.