ಕನ್ನಡ ವಿರೋಧಿ ಧೋರಣೆ | ಬೆಂಗಳೂರಿನಿಂದ ಪುಣೆಗೆ ಕಚೇರಿ ಸ್ಥಳಾಂತರ; ‘ಭಾಷಾ ಅವಿವೇಕ’ ಕಾರಣ ಎಂದ ಉದ್ಯಮಿ

Date:

Advertisements

ಬೆಂಗಳೂರಿನಲ್ಲಿ ಕಂಪನಿ ತೆರೆದಿದ್ದ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಕಚೇರಿಯನ್ನು ಬೆಂಗಳೂರಿನಿಂದ ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ನಡೆಯುತ್ತಿರುವ ‘ಭಾಷಾ ಅವಿವೇಕ’ (ಲಾಂಗ್ವೇಜ್ ನಾನ್‌ಸೆನ್ಸ್‌) ಕಾರಣ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ, ಬೆಂಗಳೂರಿನ ಚಂದಾಪುರದಲ್ಲಿರುವ ಎಸ್‌ಬಿಐ ಶಾಖೆಯ ಮಹಿಳಾ ಅಧಿಕಾರಿಯೊಬ್ಬರು ಕನ್ನಡ ಮಾತನಾಡಲು ನಿರಾಕರಿಸಿದ್ದರು. ‘ಇದು ಭಾರತ, ನಾನು ಕನ್ನಡವಳಲ್ಲ. ಹಿಂದಿಯಲ್ಲೇ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ಕನ್ನಡ ಮಾತನಾಡುವುದಿಲ್ಲ’ ಎಂದು ದುರ್ವರ್ತನೆ ತೋರಿದ್ದರು. ಅವರನ್ನು ಎಸ್‌ಬಿಐ ವರ್ಗಾವಣೆ ಮಾಡಿದೆ. ಈ ಬೆನ್ನಲ್ಲೇ, ಉದ್ಯಮಿ ಕೌಶಿಕ್ ಮುಖರ್ಜಿ ಎಂಬವರು ತಮ್ಮ ಕಂಪನಿಯ ಕಚೇರಿಯನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಟ್ವೀಟ್‌ ಮಾಡಿರುವ ಮುಖರ್ಜಿ, “ಈ ಭಾಷಾ ಅವಿವೇಕತನ ಮುಂದುವರೆಯುತ್ತಿದೆ. ನನ್ನ ಕಂಪನಿಯ ಕನ್ನಡ ಮಾತನಾಡದ ಸಿಬ್ಬಂದಿಗಳು ಮುಂದಿನ ‘ಸಂತ್ರಸ್ತ’ರಾಗಬಾರದು. ಹೀಗಾಗಿ, ಮುಂದಿನ ಆರು ತಿಂಗಳೊಳಗೆ ನನ್ನ ಕಂಪನಿಯ ಕಚೇರಿಯನ್ನು ಪುಣೆಗೆ ಸ್ಥಳಾಂತರಿಸುತ್ತೇನೆ. ನನ್ನ ನೌಕರರು ವ್ಯಕ್ತಪಡಿಸಿದ ಕಳವಳವನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

Advertisements

ಎಸ್‌ಬಿಐ ಅಧಿಕಾರಿಯ ನಡೆಯನ್ನು ಖಂಡಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಹಂಚಿಕೊಂಡಿದ್ದ ಪೋಸ್ಟ್‌ಅನ್ನು ಉಲ್ಲೇಖಿಸಿ ಕೌಶಿಕ್ ಮುಖರ್ಜಿ ಅವರು ತಮ್ಮ ಟ್ವೀಟ್ ಮಾಡಿದ್ದಾರೆ. ಎಸ್‌ಬಿಐ ಅಧಿಕಾರಿಯ ನಡೆಯನ್ನು ಖಂಡಿಸಿದ್ದ ಸೂರ್ಯ, “ನೀವು ಕರ್ನಾಟಕದಲ್ಲಿ, ವಿಶೇಷವಾಗಿ ಬ್ಯಾಂಕಿಂಗ್‌ನಂತಹ ವಲಯದಲ್ಲಿ ಗ್ರಾಹಕ ಸಂಪರ್ಕ ಕೆಲಸವನ್ನು ಮಾಡುತ್ತಿರುವಾಗ, ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ಸಂವಹನ ನಡೆಸುವುದು ಮುಖ್ಯ” ಎಂದಿದ್ದರು.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಎಸ್‌ಬಿಐ ಅಧಿಕಾರಿಯ ಧೋರಣೆಯನ್ನು ಖಂಡಿಸಿದ್ದರು. ದೇಶಾದ್ಯಂತ ಬ್ಯಾಂಕಿಂಗ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸೂಕ್ಷ್ಮತೆಯ ತರಬೇತಿ ನೀಡಬೇಕೆಂದು ಕೇಂದ್ರ ಹಣಕಾಸು ಸಚಿವಾಲಯವನ್ನು ಒತ್ತಾಯಿಸಿದ್ದರು.

ಭಾರತೀಯ ರಿಸರ್ವ್ ಬ್ಯಾಂಕ್ ಮಾನದಂಡಗಳ ಪ್ರಕಾರ, ಎಲ್ಲ ಬ್ಯಾಂಕುಗಳು ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಸೇವೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

7 COMMENTS

  1. ಆತ ಮೊದಲು ಬಂಗಾಳ ಬಿಟ್ಟು ಹೊರ ರಾಜ್ಯಕ್ಕೆ ಬರೋ ಅಗತ್ಯ ಏನಿತ್ತು ಎಂಬುದು ಮುಖ್ಯ…

  2. In tamil nadu only tamil language they speak

    In Andra pradesh only telugu

    Kerala malyalam

    Only in Karnataka our kanndigas speak all other languages except kannada to help other state people

    By talking in hindi malyalam telugu tamil

    If u want to check reality plz visit other south state and speak Hindi u wl see results

  3. ಹೋದ್ರೆ ಓಗೋ ನಮ್ಮ ಕರುನಾಡ ನೀನೆನ್ ಉದ್ದಾರ ಮಾಡ್ಬೇಡ, ಮೊದ್ಲು ನೀನು ನಿಮ್ ಊರಿಗೆ ಹೋಗೋ.

  4. Problem was not knowing kannada speaking, it was her attitude that shown I will not speak.
    Senior people must know how deal with public, else they are as good to be attender.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X