ದೆಹಲಿ ನ್ಯಾಯಮೂರ್ತಿಯ ಸರ್ಕಾರಿ ಬಂಗಲೆಯಲ್ಲಿ ಭಾರೀ ನಗದು ಪತ್ತೆ ಕುರಿತು ಹದಿನೈದು ಪುಟಗಳ ದಸ್ತಾವೇಜನ್ನು ಸುಪ್ರೀಮ್ ಕೋರ್ಟು ಬಿಡುಗಡೆ ಮಾಡಿದೆ. ಔಟ್ ಹೌಸ್ ನ ಕೋಣೆಯೊಂದರಲ್ಲಿ ನಾಲ್ಕೈದು ಚೀಲಗಳಲ್ಲಿ ತುಂಬಿದ್ದು ನೋಟುಗಳಿದ್ದವು. ಮೂರು ಫೋಟೋಗಳು ಮತ್ತು ಒಂದು ವಿಡಿಯೋವನ್ನು ಕೋರ್ಟು ಬಿಡುಗಡೆ ಮಾಡಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮ ಅವರ ಸರ್ಕಾರಿ ಬಂಗಲೆಯ ಹಿಂದಿನ ಉಗ್ರಾಣ ಕೋಣೆಯಲ್ಲಿ ಪತ್ತೆಯಾದವು ಎನ್ನಲಾದ ಚೀಲಗಳ ಭರ್ತಿ ಅರೆ ಸುಟ್ಟ ಕರೆನ್ಸಿ ನೋಟುಗಳ ಸಾಕ್ಷ್ಯಾಧಾರ ನಾಶವಾಗಿದೆ.
ಬೆಂಕಿ ತಗುಲಿದ್ದ ಈ ನೋಟುಗಳ ಅವಶೇಷಗಳನ್ನು ಗುಡಿಸಿ ಹೊರ ಸಾಗಿಸಲಾಗಿದೆ. 14 ರಾತ್ರಿ ಈ ಘಟನೆ ನಡೆದ ನಂತರ 15ರಂದು ಸುಟ್ಟ ಅವಶೇಷಗಳನ್ನೆಲ್ಲ ಸಾಗಿಸಿ ಗುಡಿಸಿ ಹಾಕಲಾಗಿತ್ತು ಎಂಬ ಅಂಶವೂ ಈ ವರದಿಯಲ್ಲಿದೆ. ಅರ್ಥಾತ್ ಸಾಕ್ಷ್ಯ ಪುರಾವೆಗಳ ನಾಶ. ಶಿಕ್ಷಾರ್ಹ ಅಪರಾಧ. ಸಾಗಿಸಿ ಗುಡಿಸಿ ಹಾಕುವಂತೆ ಆದೇಶ ನೀಡಿದವರು ಯಾರು, ಈ ಆದೇಶವನ್ನು ಪಾಲಿಸಿದವರು ಯಾರು ಎಂಬುದು ನಿಚ್ಚಳವಿಲ್ಲ.
ಆದರೆ 15ರಂದೇ ಭೋಪಾಲದಿಂದ ದೆಹಲಿ ತಲುಪಿದ ಜಸ್ಟಿಸ್ ಯಶವಂತ ವರ್ಮ ಅವರು, ನೋಟುಗಳಿರಲಿಲ್ಲ, ಗುಡಿಸಿ ಹೊರ ಸಾಗಿಸಿದ್ದು ಕೇವಲ ಕಸಕಡ್ಜಿ ಎಂದು ಹೇಳಿದ್ದಾರೆ.
ಮಾರ್ಚ್ 15ರಂದು ಸುಟ್ಟ ನಗದನ್ನು ಸಾಗಿಸಿದವರು ಯಾರು, ಜಸ್ಟಿಸ್ ವರ್ಮ ಅವರ ಸಿಬ್ಬಂದಿ, ಭದ್ರತಾ ಅಧಿಕಾರಿಗಳು, ಈ ಸಿಬ್ಬಂದಿಯ ಆರು ತಿಂಗಳ ಕಾಲದ ಫೋನ್ ಕಾಲ್ ವಿವರಗಳು, ಮೆಸೇಜುಗಳು ವರದಿಯನ್ನು ಪಡೆಯುವಂತೆ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಸೂಚಿಸಿದ್ದಾರೆ. ತಮ್ಮ ಫೋನಿನ ಯಾವುದೇ ವಿವರಗಳನ್ನು ಅಳಿಸಿ ಹಾಕದಂತೆ, ಡಿಲೀಟ್ ಮಾಡದಂತೆ ವರ್ಮ ಅವರನ್ನು ಕೋರಬೇಕೆಂದೂ ತಿಳಿಸಿದ್ದಾರೆ.
ದೆಹಲಿ ನ್ಯಾಯಮೂರ್ತಿಯ ಸರ್ಕಾರಿ ಬಂಗಲೆಯಲ್ಲಿ ಭಾರೀ ನಗದು ಪತ್ತೆ ಕುರಿತು ಹದಿನೈದು ಪುಟಗಳ ದಸ್ತಾವೇಜನ್ನು ಸುಪ್ರೀಮ್ ಕೋರ್ಟು ಬಿಡುಗಡೆ ಮಾಡಿದೆ. ಔಟ್ ಹೌಸ್ ನ ಕೋಣೆಯೊಂದರಲ್ಲಿ ನಾಲ್ಕೈದು ಚೀಲಗಳಲ್ಲಿ ತುಂಬಿದ್ದು ನೋಟುಗಳಿದ್ದವು. ಮೂರು ಫೋಟೋಗಳು ಮತ್ತು ಒಂದು ವಿಡಿಯೋವನ್ನು ಕೋರ್ಟು ಬಿಡುಗಡೆ ಮಾಡಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೀಡಿರುವ ವರದಿಯ ಮೇರೆಗೆ ಈ ದಸ್ತಾವೇಜು ಮತ್ತು ವಿಡಿಯೋ ದಾಖಲೆಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಹಲವಾರು ಪ್ಯಾರಾಗಳ ಮೇಲೆ ಕಪ್ಪು ಬಣ್ಣ ಬಳಿಯಲಾಗಿದೆ. ಬೆಂಕಿ ಬಿದ್ದ ಕೋಣೆಗೆ ಹೊರಗಿನವರು ತಲುಪುವ ಸಂಭವವೇ ಇಲ್ಲ. ಹೀಗಾಗಿ ಆಮೂಲಾಗ್ರ ತನಿಖೆ ನಡೆಯಬೇಕೆಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಶಿಫಾರಸು ಮಾಡಿದ್ದಾರೆ.
ಕರೆನ್ಸಿ ನೋಟುಗಳ ರಾಶಿಯಿಂದ ಹೊಗೆ ಏಳುತ್ತಿತ್ತು. ಅಗ್ನಿಶಾಮಕ ದಳ ಮಹಾತ್ಮ ಗಾಂಧಿ ಮೇ ಆಗ್ ಲಗ್ ರಹಾ ಹೈ ಭಾಯಿ (500ರ ನೋಟುಗಳಿಗೆ ಬೆಂಕಿ ಬಿದ್ದಿದೆಯೋ ಅಣ್ಣ) ಎಂಬ ಧ್ವನಿ ಕೇಳಿ ಬರುತ್ತದೆ.
ಮಾರ್ಚ್ 14ರಂದ ಹೋಳಿ ಹಬ್ಬದಂದು ರಾತ್ರಿ 11.30ಯ ಸುಮಾರಿನಲ್ಲಿ ಬೆಂಕಿ ಬಿದ್ದಿತ್ತು. ಜಸ್ಟಿಸ್ ಯಶವಂತ ವರ್ಮ ಮತ್ತು ಅವರ ಪತ್ನಿ ಭೋಪಾಲದಲ್ಲಿದ್ದರು. ವರ್ಮ ಅವರ ತಾಯಿ ಮತ್ತು ಮಗಳು ಮಾತ್ರವೇ ವರ್ಮ ಅವರ ದೆಹಲಿಯ ಸರ್ಕಾರಿ ಬಂಗಲೆಯಲ್ಲಿದ್ದರು. ಅಗ್ನಿಶಾಮಕ ದಳದವರಿಗೆ ಸೂಚನೆ ಹೋಗಿ ಅವರು ಬಂದು ಆರಿಸಿದರು. ಬೆಂಕಿಯ ಕಾರಣ ಶಾರ್ಟ್ ಸರ್ಕಿಟ್ ಇರಬಹುದು. ನಾಲ್ಕೈದು ಚೀಲಗಳ ತುಂಬ ಅರೆಸುಟ್ಟ ನೋಟುಗಳು ಸಿಕ್ಕವು ಎಂದು ಅಗ್ನಿಶಾಮಕ ದಳವು ತಿಳಿಸಿದೆ.
ಇದನ್ನೂ ಓದಿ ದೆಹಲಿ ನ್ಯಾಯಮೂರ್ತಿ ಬಂಗಲೆಯಲ್ಲಿ ಭರ್ತಿ ಚೀಲಗಳ ನಗದಿಗೆ ಬೆಂಕಿ ಬಿದ್ದ ಕತೆಯೇನು?
ಘಟನೆ ನೀಡಿದ ಒಂಬತ್ತು ದಿನಗಳ ನಂತರ ಈ ವಿವರಗಳು ಹೊರಬಿದ್ದವು. ದೆಹಲಿ ಪೊಲೀಸ್ ಮುಖ್ಯಸ್ಥರು ಈ ಸಂಗತಿ ತಿಳಿದ ನಂತರ 16 ತಾಸುಗಳಷ್ಟು ತಡವಾಗಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ವಾಟ್ಸ್ಯಾಪ್ ಮೂಲಕ ತಿಳಿಸಿದರು. ಮುಖ್ಯ ನ್ಯಾಯಮೂರ್ತಿಯವರು, ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ತಿಳಿಸುತ್ತಾರೆ. ಅವರು ಮುಖ್ಯ ನ್ಯಾಯಮೂರ್ತಿಯವರಿಂದ ವಿವರವಾದ ವರದಿಯೊಂದನ್ನು ಕೇಳುತ್ತಾರೆ.
ತಮ್ಮ ಮೇಲಿನ ಆಪಾದನೆಗಳು ಕುತಂತ್ರವೊಂದರ ಭಾಗ. ಈ ನೋಟುಗಳನ್ನು ಯಾರೋ ಹೊರಗಿನಿಂದ ತಂದು ಇಟ್ಟಿದ್ದಾರೆ. ಸುಟ್ಟ ನೋಟುಗಳನ್ನು ಕಾಣಿಸುವ ವಿಡಿಯೋ ನನ್ನ ಸರ್ಕಾರಿ ನಿವಾಸದ್ದಲ್ಲ. ನಗದು ಇರಲಿಲ್ಲ. ಮಾರ್ಚ್ 15ರಂದು ಗುಡಿಸಿ ಹೊರಹಾಕಿದ್ದು ಕೇವಲ ಕಸಕಡ್ಡಿ ಎಂದು ಜಸ್ಟಿಸ್ ವರ್ಮ ತಳ್ಳಿ ಹಾಕಿದ್ದಾರೆ.