ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಕಿಡಿ ಕಾರಿದ್ದು, ಯುದ್ಧದ ನಡುವೆ ಸಾವಿರಾರು ಜನರು ಸಾವನ್ನಪ್ಪಿದ ಮತ್ತು ಗಾಯಗೊಂಡಿರುವ ಗಾಜಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಅವರಿಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಹೈದರಾಬಾದ್‌ನ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಒಬ್ಬ ರಾಕ್ಷಸ, ಕ್ರೂರಿ ಮತ್ತು ಯುದ್ಧ ಅಪರಾಧಿ ಎಂದು ಆರೋಪಿಸಿದ್ದಾರೆ.
“ಇಂದಿಗೂ ಹೋರಾಡುತ್ತಿರುವ ಗಾಜಾದ ವೀರ ಸೈನಿಕರಿಗೆ ಹೃತ್ಪೂರ್ವಕ ನಮನಗಳು. ಇದಲ್ಲದೆ ಅವರ ಸಾಧನೆಗೆ ನನ್ನ ನಮನಗಳು. ಯಾವುದೇ ಸಂದರ್ಭದಲ್ಲೂ ನಾನು ಪ್ಯಾಲೆಸ್ತೀನ್ ಪರವಾಗಿ ನಿಲ್ಲುತ್ತೇನೆ. ಪ್ಯಾಲೆಸ್ತೀನಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡಲು ಬಯಸುತ್ತೇನೆ” ಎಂದು ಹೇಳಿದರು.
#WATCH | Hyderabad: On the Israel-Palestine conflict, AIMIM chief Asaduddin Owaisi says, "The poor people of Gaza, with a population of 21 lakh, 10 lakh have been rendered homeless…The world is silent…For 70 years Israel has been an occupier…You cannot see the occupation,… pic.twitter.com/9riNvVEOV1
— ANI (@ANI) October 15, 2023
“ಪ್ಯಾಲೆಸ್ತೀನ್ ಕೇವಲ ಮುಸ್ಲಿಮರ ವಿಷಯವಲ್ಲ, ಇದು ಮಾನವೀಯ ಸಮಸ್ಯೆಯಾಗಿದ್ದು ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಗಾಜಾದಲ್ಲಿ 10 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಜಗತ್ತು ಮೌನವಾಗಿದೆ. 70 ವರ್ಷಗಳಿಂದ ಇಸ್ರೇಲ್ ಪ್ಯಾಲೆಸ್ತೀನ್ ದೇಶವನ್ನು ಆಕ್ರಮಿಸಿಕೊಂಡಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಬದುಕಬೇಕಾದರೆ ಭಾರತ್ ಮಾತಾ ಕಿ ಜೈ ಎಂದು ಹೇಳಬೇಕು: ಕೇಂದ್ರ ಸಚಿವ ಕೈಲಾಶ್ ಚೌಧರಿ
ಈ ಹಿಂದೆ, ಇಸ್ರೇಲ್ ದಾಳಿಯನ್ನು ಖಂಡಿಸುವ ಸಂದರ್ಭದಲ್ಲಿ ಕಾಂಗ್ರೆಸ್ ‘ಪ್ಯಾಲೆಸ್ತೀನ್ ಹಕ್ಕುಗಳಿಗೆ’ ತನ್ನ ಬೆಂಬಲವನ್ನು ವ್ಯಕ್ತಪಡಿಸಿತ್ತು. ಹಮಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿಯ ಅಲೆಯನ್ನು ಪ್ರಾರಂಭಿಸಿತು, ನೂರಾರು ಜನರನ್ನು ಕೊಂದಿತು. ಇದು ದಶಕಗಳಲ್ಲಿ ಸಂಘರ್ಷದ ಅತಿದೊಡ್ಡ ಉಲ್ಬಣವಾಗಿದೆ.
ಹಮಸ್ ಹೋರಾಟಗಾರರು ನಡೆಸಿದ ದಾಳಿಯಿಂದ ಇಸ್ರೇಲಿನ 1,300 ಮಂದಿ ಮೃತಪಟ್ಟರೆ, ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಗಾಜಾದಲ್ಲಿ 2,200 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.