ಅಸ್ಸಾಂ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ನೀರಿನ ಮಟ್ಟ ವೇಗವಾಗಿ ಕಡಿಮೆಯಾಗುತ್ತಿದೆ. ಅಸ್ಸಾಂನಲ್ಲಿ ಸೋಮವಾರ ಪ್ರವಾಹ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುವಾಹಟಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರವು ಬರಾಕ್ ಕಣಿವೆ ಮತ್ತು ಮಧ್ಯ ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಿದ್ದಾರೆ. ಇದನ್ನು ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಪ್ರದೇಶಗಳಲ್ಲಿಯೂ ಮಳೆ ಮನ್ಸೂಚನೆಯನ್ನು ನೀಡಿಲ್ಲ.
ಈ ನಡುವೆ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯು ಭಾನುವಾರ ರಾತ್ರಿ ಕರೀಮ್‌ಗಂಜ್ ಜಿಲ್ಲೆಯ ಕರೀಮ್‌ಗಂಜ್ ಮತ್ತು ನಿಲಂಬಜಾರ್ ಕಂದಾಯ ವಲಯಗಳಲ್ಲಿ ಒಟ್ಟಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇದರಿಂದಾಗಿ ಅಸ್ಸಾಂ ಪ್ರವಾಹ, ಭೂಕುಸಿತ, ಬಿರುಗಾಳಿ ಮತ್ತು ಸಿಡಿಲಿಗೆ ಬಲಿಯಾದವರ ಒಟ್ಟು ಸಂಖ್ಯೆ 109ಕ್ಕೆ ಏರಿಕೆಯಾಗಿದೆ.
ಅಸ್ಸಾಂನ ಪ್ರಮುಖ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ 5,97,600ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಕಚಾರ್‌ನಲ್ಲಿ ಪ್ರವಾಹದಿಂದಾಗಿ ಅಧಿಕ ಹಾನಿಯಾಗಿದ್ದು ಸುಮಾರು 1.16 ಲಕ್ಷ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಧುಬ್ರಿಯಲ್ಲಿ 81,500 ಜನರು ಮತ್ತು ನಾಗಾವ್‌ನಲ್ಲಿ 76,000ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಅಸ್ಸಾಂ ಪ್ರವಾಹ | ಸಾವಿನ ಸಂಖ್ಯೆ 58ಕ್ಕೆ ಏರಿಕೆ; 23 ಲಕ್ಷ ಜನರ ಜೀವನ ಅತಂತ್ರ
13 ಜಿಲ್ಲೆಗಳಲ್ಲಿ 172 ನಿರಾಶ್ರಿತರ ಕೇಂದ್ರಗಳನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಪ್ರಸ್ತುತ 58,816 ನಿರಾಶ್ರಿತರು ಈ ಕೇಂದ್ರಗಳಲ್ಲಿ ಇದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಪ್ರಾಧಿಕಾರವು 594.48 ಕ್ವಿಂಟಾಲ್ ಅಕ್ಕಿ, 110.95 ಕ್ವಿಂಟಲ್ ಬೇಳೆ, 28.82 ಕ್ವಿಂಟಲ್ ಉಪ್ಪು ಮತ್ತು 2,580.04 ಲೀಟರ್ ಸಾಸಿವೆ ಎಣ್ಣೆಯನ್ನು ವಿತರಿಸಿದೆ.
ಪ್ರಸ್ತುತ 1,342 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸಾಂನಾದ್ಯಂತ 25,367.61 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಎಎಸ್‌ಡಿಎಂಎ ತಿಳಿಸಿದೆ. ಇನ್ನು ಪ್ರವಾಹದಿಂದಾಗಿ ರಸ್ತೆಗಳು, ಸೇತುವೆಗಳು ಮತ್ತು ಇತರೆ ಮೂಲಸೌಕರ್ಯಗಳಿಗೆ ಹಾನಿಯಾಗಿವೆ.
ಪ್ರಸ್ತುತ, ನಿಮತಿಘಾಟ್, ತೇಜ್‌ಪುರ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉಪನದಿಗಳಾದ ಚೆನಿಮರಿಯಲ್ಲಿ ಬುರ್ಹಿದಿಹಿಂಗ್ ಮತ್ತು ನಂಗ್ಲಮುರಘಾಟ್‌ನಲ್ಲಿ ದಿಸಾಂಗ್ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ವ್ಯಾಪಕವಾದ ಪ್ರವಾಹದಿಂದಾಗಿ 2,83,700 ಸಾಕುಪ್ರಾಣಿಗಳು ಮತ್ತು ಕೋಳಿಗಳಿಗೆ ಹಾನಿಯಾಗಿದೆ.
Assamese #news caster first hand reports about the #flood situation in #Assam. Truly submersive experience. Hilariously #Serious pic.twitter.com/X3ZIprzIVG
— Laxma Reddy (@journo_laxman) July 15, 2024