ಅಸ್ಸಾಂನ ಪ್ರತ್ಯೇಕತಾವಾದಿ ಗುಂಪು ‘ಉಲ್ಫಾ’ ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ತ್ರಿಪಕ್ಷೀಯ ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಉಪಸ್ಥಿತರಿದ್ದರು.
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂನ ಉಜ್ವಲ ಭವಿಷ್ಯದ ದಿನಕ್ಕಾಗಿ ಇಂದಿನ ಘಟನೆಯು ನನಗೆ ಸಂತಸವನ್ನು ಉಂಟುಮಾಡಿದೆ. ಸುದೀರ್ಘ ಕಾಲದಿಂದ ಅಸ್ಸಾಂ ಹಾಗೂ ಈಶಾನ್ಯ ಭಾಗವು ಹಿಂಸಾಚಾರಕ್ಕೆ ಒಳಗಾಗಿದೆ ಎಂದು ಹೇಳಿದರು.
“ನೀವು ಗೃಹ ಇಲಾಖೆ ಕಡೆಯಿಂದ ಭಾರತ ಸರ್ಕಾರದ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ‘ಉಲ್ಪಾ’ ಪ್ರತಿನಿಧಿಗಳಿಗೆ ನಾನು ಭರವಸೆ ನೀಡುತ್ತೇನೆ. ನೀವು ಕೇಳುವ ಅಗತ್ಯವಿಲ್ಲದೆ ಎಲ್ಲವನ್ನು ಕಾಲಮಿತಿಯೊಳಗೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಅಮಿತ್ ಶಾ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?
‘ಉಲ್ಫಾ’ ಸಂಘಟನೆ ಒಪ್ಪಂದಕ್ಕೆ ಸಹಿ ಹಾಕಿರುವುದು ಸಂಪೂರ್ಣ ಈಶಾನ್ಯ ರಾಜ್ಯ ಹಾಗೂ ಪ್ರಮುಖವಾಗಿ ಅಸ್ಸಾಂನಲ್ಲಿ ಶಾಂತಿ ನೆಲೆಸುವ ಆರಂಭಿಕ ಸೂಚನೆಯಾಗಿದೆ. ಪ್ರತ್ಯೇಕತಾವಾದಿಗಳ ಗುಂಪಿನ ಉಪಟಳದಿಂದ ಅಸ್ಸಾಂನಲ್ಲಿ 1979ರಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಾಜ್ಯವು ಕೂಡ ಹಿಂಸೆಯಿಂದ ಬಳಲುತ್ತಿತ್ತು” ಎಂದು ಅಮಿತ್ ಶಾ ತಿಳಿಸಿದ್ದಾರೆ.
‘ಉಲ್ಫಾ’ ಸಂಘಟನೆಯನ್ನು ಭಾರತದ ಭಯೋತ್ಪಾದಕ ಸಂಘಟನೆಯಂದು ನಿರ್ಧರಿಸಿ 1990ರಲ್ಲಿ ನಿಷೇಧಿಸಲಾಗಿತ್ತು. 2011ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ‘ಉಲ್ಫಾ’ ಸಹಿ ಮಾಡಿತ್ತು.